ADVERTISEMENT

ಟಿಎಪಿಸಿಎಂಎಸ್‌ ಸರ್ವ ಸದಸ್ಯರ ಸಭೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 13:12 IST
Last Updated 21 ಸೆಪ್ಟೆಂಬರ್ 2023, 13:12 IST
ಮಾಗಡಿ ಟಿಎಪಿಸಿಎಂಎಸ್‌ ಸರ್ವ ಸದಸ್ಯರ ಸಭೆಗೆ ಸಂಘದ ನಿರ್ದೇಶಕ ಎಚ್‌.ಜಿ. ನಾರಾಯಣಸ್ವಾಮಿ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಮುತ್ತು ಸಾಗರದ ಸೋಮಶೇಖರ್‌, ಹೊನ್ನಾಪುರದ ಸಿದ್ದರಾಜು, ಗೀತಾ, ನಂಜುಂಡಪ್ಪ ಇದ್ದರು
ಮಾಗಡಿ ಟಿಎಪಿಸಿಎಂಎಸ್‌ ಸರ್ವ ಸದಸ್ಯರ ಸಭೆಗೆ ಸಂಘದ ನಿರ್ದೇಶಕ ಎಚ್‌.ಜಿ. ನಾರಾಯಣಸ್ವಾಮಿ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಮುತ್ತು ಸಾಗರದ ಸೋಮಶೇಖರ್‌, ಹೊನ್ನಾಪುರದ ಸಿದ್ದರಾಜು, ಗೀತಾ, ನಂಜುಂಡಪ್ಪ ಇದ್ದರು   

ಮಾಗಡಿ: ಪಟ್ಟಣದ ಕಲ್ಯಾಬಾಗಿಲು ಸಿದ್ದಾರೂಢಾಶ್ರಮದ ಸಮುದಾಯ ಭವನದಲ್ಲಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್‌) 2022–23ನೇ ಸಾಲಿನ ಸರ್ವ ಸದಸ್ಯರ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ  ಮುತ್ತುಸಾಗರದ ಸೋಮಶೇಖರ್‌ ಮಾತನಾಡಿ,  ಎಚ್‌.ವಿ.ರಂಗಪ್ಪ ಅಧ್ಯಕ್ಷರಾಗಿದ್ದಾಗ  ಹೊಸಪೇಟೆ ಸರ್ಕಲ್‌ ಬಳಿ ಖರೀದಿಸಿದ್ದ ನಿವೇಶನದಲ್ಲಿ ₹ 4 ಕೋಟಿ ವೆಚ್ಚದಲ್ಲಿ ಗೋದಾಮು ಕಟ್ಟಿಸಲಾಗುವುದು. ಸ್ವಂತ ಕಟ್ಟಡ ಕಟ್ಟಿದರೆ ಬಾಡಿಗೆ ಹಣ ಉಳಿಯಲಿದೆ. ಪ್ರಸ್ತುತ ವರ್ಷ ಸಂಘವು ₹ 27 ಲಕ್ಷ ಲಾಭ ಗಳಿಸಿದೆ. ರೈತರಿಗಾಗಿ ರಸಗೊಬ್ಬರವನ್ನು ಲಾಭವಿಲ್ಲದೆ ₹ 280ಕ್ಕೆ ಮಾರಾಟ ಮಾಡುತ್ತಿದ್ದೇವೆ. ರೈತರಿಗೆ ಬೇಕಾದ ರಸಗೊಬ್ಬರ, ಗುಣಮಟ್ಟದ ಬಿತ್ತನೆ ಬೀಜ, ಕ್ರಿಮಿನಾಶಕ ವಿತರಿಸುವುದರ ಜೊತೆಗೆ ಜವಳಿ ಶಾಖೆ ಆರಂಭಿಸಲು ಯೋಜನೆ ರೂಪಡಿಸಿದ್ದೇವೆ’ ಎಂದು ವಿವರಿಸಿದರು.

ಟಿಎಪಿಸಿಎಂಎಸ್‌ನ ಉಪಾಧ್ಯಕ್ಷ ನಂಜುಂಡಯ್ಯ, ನಿರ್ದೇಶಕರಾದ ಎಚ್‌.ಜಿ.ನಾರಾಯಣ ಸ್ವಾಮಿ, ಹೊನ್ನಾಪುರಸ ಶಿವಪ್ರಸಾದ್‌, ರವೀಶ್‌, ರಾಜು, ಮಂಜುನಾಥ್‌, ಶಿಲ್ಪಶ್ರೀ, ಗೀತಾ, ಮಹದೇವ್‌, ರಮೇಶ್‌, ಪ್ರಭಾರ ಕಾರ್ಯದರ್ಶಿ ನಾರಾಯಣ್‌, ರಘು ಜವರಪ್ಪ ಇದ್ದರು.

ADVERTISEMENT

ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.