ಹಾರೋಹಳ್ಳಿ: ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ. ಹೆತ್ತವರ ಕನಸುಗಳಿಗೆ ಆಶಾದೀಪವಾಗಿ ಎಂದು ಪ್ರಾಂಶುಪಾಲ ಪ್ರೊ.ಕಿಶೋರ.ಎಂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರ ಕೊಡುಗೆ ದೊಡ್ಡದು. ಈ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಕೇವಲ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗದೆ ಇಡೀ ಸಮಾಜ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮೂಲಕ ಶಿಕ್ಷಕ ಸಮುದಾಯವನ್ನು ಗೌರವಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿನಿ ರಕ್ಷಿತಾ ಮಾತನಾಡಿ, ಕಾಲೇಜಿನ ಎಲ್ಲ ಪದವಿ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸುತ್ತಿರುವ ಗುರುಗಳನ್ನು ವಂದಿಸುವ ಈ ಸುದಿನವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಡಾ.ಹೇಮ ನಾಯ್ಕ, ಡಾ.ರಮೇಶ್, ಪ್ರೊ.ಉಮೇಶ್, ಡಾ.ಲಕ್ಷ್ಮಮ್ಮ, ಡಾ.ಶೋಭಾ, ಡಾ.ಗೀತಾ, ಡಾ. ಚೇತನ್, ಡಾ.ಅನಿತಾ, ಪ್ರೊ.ಕಾಳಾನಾಯ್ಕ, ರೂಪ ಬಾಯಿ, ಆನಂದ್ ನೇಲಿ, ಶ್ವೇತ, ನರಸಿಂಹ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.