ADVERTISEMENT

ಚನ್ನಪಟ್ಟಣದಲ್ಲಿ ಬಿರುಗಾಳಿ ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 29 ಮೇ 2023, 15:52 IST
Last Updated 29 ಮೇ 2023, 15:52 IST
ಚನ್ನಪಟ್ಟಣದ ಎಂ.ಜಿ. ರಸ್ತೆಯ ಪಶು ಆಸ್ಪತ್ರೆಯ ಮುಂಭಾಗದಲ್ಲಿ ನೀಲಗಿರಿ ಮರದ ಕೊಂಬೆ ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದಿರುವುದು
ಚನ್ನಪಟ್ಟಣದ ಎಂ.ಜಿ. ರಸ್ತೆಯ ಪಶು ಆಸ್ಪತ್ರೆಯ ಮುಂಭಾಗದಲ್ಲಿ ನೀಲಗಿರಿ ಮರದ ಕೊಂಬೆ ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದಿರುವುದು   

ಚನ್ನಪಟ್ಟಣ: ನಗರದಲ್ಲಿ ಸೋಮವಾರ ಮಧ್ಯಾಹ್ನ ಬಿರುಗಾಳಿ ಸಹಿತ ಮಳೆ ಸುರಿಯಿತು. ಬಿರುಗಾಳಿಗೆ ನಗರದ ಎಂ.ಜಿ.ರಸ್ತೆಯ ಮಿಷನ್ ಆಸ್ಪತ್ರೆ ಬಳಿ ಇದ್ದ ಭಾರಿ ನೀಲಗಿರಿ ಮರದ ಕೊಂಬೆಯೊಂದು ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದ ಘಟನೆ ನಡೆದಿದೆ.

ವಿದ್ಯುತ್ ಲೈನ್ ಮೇಲೆ ಕೊಂಬೆ ಬಿದ್ದ ತಕ್ಷಣ ವಿದ್ಯುತ್ ಕಡಿತಗೊಂಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆ ಮರದಡಿ ಫುಟ್‌ಪಾತ್‌ನಲ್ಲಿ ತಳ್ಳುಗಾಡಿಯಲ್ಲಿ ಕೆಲವರು ವ್ಯಾಪಾರ ಮಾಡುತ್ತಿದ್ದರು. ಮರದ ಕೊಂಬೆ ಮುರಿಯುವ ಶಬ್ದ ಕೇಳಿ ವ್ಯಾಪಾರಸ್ಥರು ಸ್ಥಳದಿಂದ ಓಡಿದ ಕಾರಣ ಯಾರಿಗೂ ಯಾವುದೇ ಅಪಾಯವಾಗಿಲ್ಲ.

ನಗರದ ಪ್ರಮುಖ ರಸ್ತೆಯಾದ ಎಂ.ಜಿ.ರಸ್ತೆಯಲ್ಲಿ ಘಟನೆ ನಡೆದ ಕಾರಣ ಸ್ಥಳದಲ್ಲಿದ್ದವರು ಭೀತಿಗೊಂಡಿದ್ದರು. ವಿಷಯ ತಿಳಿದ ಬೆಸ್ಕಾಂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದು ಮರ ತೆರವುಗೊಳಿಸಿದರು.

ADVERTISEMENT

ತಾಲ್ಲೂಕಿನ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಮರದ ಕೊಂಬೆಗಳು ಉರುಳಿ ಬಿದ್ದವೆ. ಬಿರುಗಾಳಿ ಸಹಿತ ಮಳೆ ಬಂದ ಕಾರಣ ಸಾರ್ವಜನಿಕರು ಭೀತಿಗೊಂಡರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.