ರಾಮನಗರ: ಇಲ್ಲಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆಯು ಅನಿರ್ದಿಷ್ಟ ಅವಧಿಗೆ ಲಾಕೌಟ್ ಘೋಷಣೆ ಮಾಡಿದೆ.
ಅಶಿಸ್ತು ತೋರಿದ ಆರೋಪದ ಮೇಲೆ ಕಾರ್ಮಿಕ ಯೂನಿಯನ್ ಖಜಾಂಚಿ ಉಮೇಶ್ ಆಲೂರು ಎಂಬುವರನ್ನು ಕಂಪನಿಯು ಸೇವೆಯಿಂದ ಅಮಾನತು ಗೊಳಿಸಿತ್ತು. ಇದನ್ನು ಖಂಡಿಸಿ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದ್ದರು.
‘ಏಕಾಏಕಿ ಪ್ರತಿಭಟನೆ ನಡೆಸಿದ್ದು ಹಾಗೂ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದ್ದಕ್ಕಾಗಿ ಲಾಕೌಟ್ ಘೋಷಿಸಲಾಗಿದೆ. ಕಾರ್ಮಿಕ ಯೂನಿಯನ್ ಜೊತೆ ಮಾತುಕತೆ ನಡೆದಿದೆ’ ಎಂದು ಟಿಕೆಎಂ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.