ADVERTISEMENT

ಹಾರೋಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 5:45 IST
Last Updated 30 ಅಕ್ಟೋಬರ್ 2023, 5:45 IST

ಹಾರೋಹಳ್ಳಿ: ಪಟ್ಟಣದಲ್ಲಿ ರಸಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಾಲೂಕು ಆಡಳಿತದಿಂದ ನಡೆಯಿತು.

ತಮಟೆ, ನಗಾರಿ, ಜಾನಪದ ಕಲಾ ಮೇಳಗಳೊಂದಿಗೆ ಬೆಂಗಳೂರು ಮುಖ್ಯ ರಸ್ತೆಯಿಂದ ರಾಜ್ಯ ಸಾರಿಗೆ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಯಿತು.

‌ಬಳಿಕ ತಾಲ್ಲೂಕು ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ತಹಶೀಲ್ದಾರ್ ವಿಜಿಯಣ್ಣ ಮಾತನಾಡಿ, ಸರ್ವಕಾಲಿಕ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಜನ್ಮದಿನ ಆಚರಿಸುತ್ತಿರುವುದು ಅರ್ಥಪೂರ್ಣ ಎಂದರು.

ADVERTISEMENT

ಪಟ್ಟಣ ಪಂಚಾಯಿತಿ ಅಧಿಕಾರಿ ನಟರಾಜ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಆದಿಕವಿಯಾಗಿ ಸಂಸ್ಕೃತ ಭಾಷೆ ಮೊದಲ ಕವಿಯಾಗಿ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ರಾಮಾಯಣ ರಚಿಸುವ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಬಾಲಕರಿದ್ದಾಗಲೇ ಕಾಡಿನಲ್ಲಿ
ಸಂಚರಿಸಿ ಒಂದು ದಿನ ಬೇಟೆಗಾರನೊಬ್ಬನ ಕಣ್ಣಿಗೆ ಬಿದ್ದು ಅವರಿಂದ ಆರೈಕೆ ಪಡೆದು ಮನೆ ತ್ಯಜಿಸುತ್ತಾರೆ. ನಂತರ ಅವರ ಮಾರ್ಗದರ್ಶನದಲ್ಲಿ ಉತ್ತಮ ಬೇಟೆಗಾರರಾದ ವಾಲ್ಮೀಕಿ, ರಾಮಾಯಣ ಮಹಾಕಾವ್ಯ ರಚಿಸಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ ಎಂದು ಬಣ್ಣಿಸಿದರು.

ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕೋಟೆ ಕುಮಾರ್, ಶಿರಸ್ತೇದಾರ್ ನವೀನ್‌ಕುಮಾರ್, ಮುಖಂಡರಾದ ರುದ್ರೇಶ್, ವೆಂಕಟಪ್ಪ, ಸಿದ್ದರಾಜು, ತೇರುಬೀದಿ ಶ್ರೀನಿವಾಸ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.