ADVERTISEMENT

ಮಾಗಡಿ | ಶಸ್ತ್ರಾಸ್ತ್ರ ಪರವಾನಿಗೆದಾರರ ಸಭೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:13 IST
Last Updated 25 ಜುಲೈ 2025, 2:13 IST
ಮಾಗಡಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದ ಶಸ್ತ್ರಾಸ್ತ್ರ ಪರವಾನಿಗೆದಾರರ ಸಭೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜಿ.ವೈ.ಗಿರಿರಾಜ್ ಮಾತನಾಡಿದರು
ಮಾಗಡಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದ ಶಸ್ತ್ರಾಸ್ತ್ರ ಪರವಾನಿಗೆದಾರರ ಸಭೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜಿ.ವೈ.ಗಿರಿರಾಜ್ ಮಾತನಾಡಿದರು   

ಮಾಗಡಿ: ಪಟ್ಟಣದಲ್ಲಿ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶಸ್ತ್ರಾಸ್ತ್ರ ಪರವಾನಿಗೆದಾರರ ಸಭೆ ಗುರುವಾರ ನಡೆಯಿತು.

ಪರವಾನಿಗೆ ಆಯುಧಗಳನ್ನು ಹೊಂದಿರುವವರು ಸುರಕ್ಷಿತವಾಗಿ ಮನೆಯಲ್ಲಿ ಇಟ್ಟುಕೊಳ್ಳಬೇಕು. ಮಕ್ಕಳು ಹಾಗೂ ಮಹಿಳೆಯರಿಗೆ ಸಿಗದಂತೆ ಜೋಪಾನವಾಗಿ ಇಟ್ಟುಕೊಳ್ಳಬೇಕು. ಪರವಾನಿಗೆ ಹೊಂದಿರುವ ವ್ಯಕ್ತಿಯನ್ನು ಹೊರತುಪಡಿಸಿ ಇತರೆ ಯಾವುದೇ ವ್ಯಕ್ತಿಗಳು ಶಸ್ತ್ರಾಸ್ತ್ರ ಬಳಕೆ ಮಾಡಬಾರದು. ಕಾಲಕಾಲಕ್ಕೆ ಪರವಾನಿಗೆ ನವೀಕರಣಗೊಳಿಸಬೇಕು. ಪರವಾನಿಗೆ ಅವಧಿ ಮೀರಿರುವ ಶಸ್ತ್ರಾಸ್ತ್ರಗಳನ್ನು ಶಸ್ತ್ರಗಾರಕ್ಕೆ ಹಿಂದಿರುಗಿಸುವಂತೆ ‌ಪೊಲೀಸ್ ಇನ್ಸ್‌ಪೆಕ್ಟರ್ ಜಿ.ವೈ.ಗಿರಿರಾಜ್ ತಿಳಿಸಿದರು.

ಹಲವು ಮಂದಿ ಶಸ್ತ್ರಾಸ್ತ್ರದೊಂದಿಗೆ ಠಾಣೆಗೆ ಬಂದು ಅಧಿಕಾರಿಗಳು ಸೂಚಿಸಿದ ಮಾರ್ಗದರ್ಶನವನ್ನು ಪಾಲಿಸುತ್ತೇವೆ ಎಂದು ತಿಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.