ADVERTISEMENT

ಪ್ರೇಮ ವೈಫಲ್ಯ: ಜಿಮ್ ತರಬೇತುದಾರನಿಗೆ ಚಾಕುವಿನಿಂದ ಇರಿದ ಯುವತಿ

ಕೃತ್ಯದ ಬಳಿಕ ಠಾಣೆಗೆ ಶರಣಾದ ಯುವತಿ: ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಯುವಕ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:51 IST
Last Updated 27 ಫೆಬ್ರುವರಿ 2026, 7:51 IST
<div class="paragraphs"><p>ಚಾಕು ಇರಿತಕ್ಕೆ ಒಳಗಾದ ವೇಣುಗೋಪಾಲ್</p></div>

ಚಾಕು ಇರಿತಕ್ಕೆ ಒಳಗಾದ ವೇಣುಗೋಪಾಲ್

   

ಬಿಡದಿ (ರಾಮನಗರ): ಪ್ರೇಮ ವೈಫಲ್ಯದಿಂದ ಬೇಸತ್ತ ಯುವತಿಯೊಬ್ಬಳು ತನ್ನಿಂದ ಅಂತರ ಕಾಯ್ದುಕೊಂಡಿದ್ದ ಜಿಮ್ ತರಬೇತುದಾರ ಪ್ರೇಮಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಪಟ್ಟಣದ ಸಿಲ್ಕ್ ಫಾರ್ಮ್ ಕ್ವಾಟ್ರಸ್ ಬಳಿ ಗುರುವಾರ ರಾತ್ರಿ ನಡೆದಿದೆ.

ವೇಣುಗೋಪಾಲ್ (27) ಚಾಕುವಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿರುವ 30 ವರ್ಷದ ಸುಧಾ ಘಟನೆ ಬಳಿಕ ಬಿಡದಿ ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ.

ADVERTISEMENT

ಪಟ್ಟಣದ ಜಿಮ್‌ನಲ್ಲಿ ಟ್ರೈನರ್ ಆಗಿರುವ ವೇಣುಗೋಪಾಲ್ ಮತ್ತು ಸುಧಾ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಕೆಲ ದಿನಗಳಿಂದ ಸುಧಾ ಜೊತೆ ವೇಣುಗೋಪಾಲ್ ಅಂತರ ಕಾಯ್ದುಕೊಂಡಿದ್ದರು. ಮೊಬೈಲ್ ಕರೆ ಸಹ ಸ್ವೀಕರಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದರು.

ಇದರಿಂದ ಬೇಸತ್ತ ಸುಧಾ, ತನಗೆ ಮೋಸ ಮಾಡುತ್ತಿರುವ ಯುವಕನ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾಳೆ. ಮಾತನಾಡಬೇಕಿದೆ ಎಂದು ಗುರುವಾರ ರಾತ್ರಿ ಯುವಕನನ್ನು ತನ್ನ ಮನೆ ಬಳಿಗೆ ಕರೆಯಿಸಿಕೊಂಡು ಚಾಕುವಿನಿಂದ ಹೊಟ್ಟೆ, ಎದೆ ಹಾಗೂ ಭುಜಕ್ಕೆ ಇರಿದಿದ್ದಾಳೆ. ನೋವಿನಿಂದ ಯುವಕ ಕೆಳಕ್ಕೆ ಬೀಳುತ್ತಿದ್ದಂತೆ ಯುವತಿ ಸ್ಥಳದಿಂದ ಕಾಲ್ಕಿತ್ತಿದ್ದಾಳೆ ಎಂದು ಪೊಲೀಸರು ಹೇಳಿದರು.

ಚಾಕು ಇರಿತ ತೀವ್ರತೆಗೆ ಯುವಕನ ಕರಳು ಹೊರಕ್ಕೆ ಬಂದಿದೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃತ್ಯದ ಬಳಿಕ ಯುವತಿ ಠಾಣೆಗೆ ಬಂದು ಶರಣಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಆರೋಪಿ ಸುಧಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.