ADVERTISEMENT

ಸಾಲುಗಟ್ಟಿ ನಿಂತ ಮಹಿಳೆಯರು- ವಂಡರ್‌ಲಾದಿಂದ ವಿಶೇಷ ಕೊಡುಗೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 5:51 IST
Last Updated 9 ಮಾರ್ಚ್ 2022, 5:51 IST
ಮಂಗಳವಾರ ವಂಡರ್‌ಲಾಗೆ ಬಂದ ಮಹಿಳೆಯರು
ಮಂಗಳವಾರ ವಂಡರ್‌ಲಾಗೆ ಬಂದ ಮಹಿಳೆಯರು   

ರಾಮನಗರ: ಬಿಡದಿಯ ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್ ಮಹಿಳಾ ದಿನಾಚರಣೆ ಅಂಗವಾಗಿ ಪಾರ್ಕ್‌ಗೆ ವಿಶೇಷ ಕೊಡುಗೆ ಘೋಷಿಸಿದ್ದು, ಇದನ್ನು ನೆಚ್ಚಿ ಬಂದ ಸಾವಿರಾರು ಮಹಿಳೆಯರು ಟಿಕೆಟ್‌ ಸಿಗದೆ ನಿರಾಸೆಯಿಂದ ವಾಪಸ್‌ ಆದರು.

ಮಹಿಳಾ ದಿನದ ಅಂಗವಾಗಿ ವಂಡರ್‌ಲಾ ಮಂಗಳವಾರ ಇಡೀ ಪಾರ್ಕ್‌ ಅನ್ನು ಸ್ತ್ರೀಯರಿಗಾಗಿ ಮೀಸಲಿಟ್ಟಿತ್ತು. ಅಂತೆಯೇ ಒಂದು ಟಿಕೆಟ್ ಕೊಂಡಲ್ಲಿ ಮತ್ತೊಬ್ಬ ಮಹಿಳೆಗೆ ಉಚಿತ ಪ್ರವೇಶದ ಕೊಡುಗೆ ನೀಡಿತ್ತು. ಸಾಕಷ್ಟು ಮುಂಚೆಯೇ ಆನ್‌ಲೈನ್‌ ಬುಕ್ಕಿಂಗ್‌ ಆರಂಭ ಆಗಿತ್ತು. ಬುಕ್ಕಿಂಗ್ ಹೆಚ್ಚಾದ ಹಿನ್ನೆಲೆಯಲ್ಲಿ ಮೂರು ದಿನದ ಹಿಂದೆಯೇ ಆನ್‌ಲೈನ್‌ ಬುಕ್ಕಿಂಗ್‌ ನಿಲ್ಲಿಸಲಾಗಿತ್ತು.

ಮುಂಜಾನೆ 6ರಿಂದಲೇ ಪಾರ್ಕಿನಲ್ಲಿ ಟಿಕೆಟ್ ಕೌಂಟರ್‌ಗಳು ತೆರೆದಿದ್ದು, 10 ಗಂಟೆ ವೇಳೆಗೆಲ್ಲ ಎಲ್ಲಾ ಟಿಕೆಟ್‌ಗಳು ಮಾರಾಟ ಆದವು. ಪಾರ್ಕ್‌ ಒಟ್ಟು 12 ಸಾವಿರ ಮಂದಿ ಪ್ರವೇಶ ಸಾಮರ್ಥ್ಯ ಹೊಂದಿದ್ದು, ಕೋವಿಡ್ ಮಾರ್ಗಸೂಚಿ ಕಾರಣಕ್ಕೆ 5–6 ಸಾವಿರ ಮಂದಿಗೆ ಪ್ರವೇಶ ಸೀಮಿತಗೊಳಿಸಲಾಯಿತು.

ADVERTISEMENT

ಆದರೆ, ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಬಂದಿದ್ದು, ಟಿಕೆಟ್‌ ಸಿಗದ ಕಾರಣಕ್ಕೆ ನಿರಾಸೆ ಗೊಂಡರು. ಈ ಬಗ್ಗೆ ವಂಡರ್‌ಲಾ ಸಿಬ್ಬಂದಿ ಜೊತೆ ವಾಗ್ದಾದ ನಡೆಸಿದರು. ಕಡೆಗೆ ಪೊಲೀಸರು ಮಧ್ಯ ಪ್ರವೇಶಿಸಿ, ಅಲ್ಲಿಂದ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.