
ರಾಮನಗರ: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಲುವಾಗಿ ಮನರಂಜನಾ ತಾಣವಾದ ವಂಡರ್‌ಲಾ ತನ್ನ ಪಾರ್ಕ್ ಮತ್ತು ರೆಸಾರ್ಟ್‌ಗಳಲ್ಲಿ ವಿಶೇಷ ಕೊಡುಗೆ ನೀಡುತ್ತಿದೆ. ಡಿ.20 ರಿಂದ ಜ.4ರವರೆಗೆ 16 ದಿನ ಕ್ರಿಸ್‌ಮಸ್ ಟ್ರೀ ಲೈಟಿಂಗ್‌ನೊಂದಿಗೆ ಆರಂಭವಾಗುವ ಗ್ರ್ಯಾಂಡ್ ಉತ್ಸವದಲ್ಲಿ ಲೈವ್ ಮನರಂಜನೆ, ಡಿ.ಜೆ ನೈಟ್ಸ್, ಪಟಾಕಿಗಳ ಪ್ರದರ್ಶನ ನಡೆಯಲಿವೆ.
ಈ ಉತ್ಸವಗಳಲ್ಲಿ ಸಂಗೀತ, ನೃತ್ಯ, ಸಾಂಸ್ಕೃತಿಕ ಪ್ರದರ್ಶನ ಮತ್ತು ಉದ್ಯಾನವನದ ಸಿಗ್ನೇಚರ್ ರೈಡ್ ಮತ್ತು ಆಕರ್ಷಣೆ ಜೊತೆಗೆ ಕ್ರಿಸ್‌ಮಸ್ ವಿಶೇಷ ಕೊಡುಗೆ ಇರಲಿವೆ.
ವೇವ್ ಪೂಲ್‌ನಲ್ಲಿ ಡಿ.ಜೆ. ನೈಟ್ಸ್, ಹೈ-ಎನರ್ಜಿ ಬ್ಯಾಂಡ್ ಶೋ ಮತ್ತು ಆಕರ್ಷಕ ಜುಂಬಾ ಸೇರಿದಂತೆ ವೈವಿಧ್ಯಮಯ ಮನರಂಜನೆ ಸಿಗಲಿದೆ. 16 ದಿನವೂ ಪಾರ್ಕಿನಲ್ಲಿ ಬ್ಯಾಂಡ್ ಮೆರವಣಿಗೆ ಇರುತ್ತದೆ. ಡಿ. 25 ಮತ್ತು 27–28ರವರೆಗೆ ಸ್ಟಿಲ್ಟ್ ವಾಕರ್ಸ್ ಮತ್ತು ಚೈನೀಸ್ ಲಯನ್ ಡಾನ್ಸ್ ಪ್ರದರ್ಶನ ಇರಲಿದೆ. ಡಿ. 26ರಿಂದ ಜ. 1ರವರೆಗೆ ಜಗ್ಲಿಂಗ್ ಪ್ರದರ್ಶನ, ಮ್ಯಾಜಿಕ್ ಹಾಗೂ ಯುನಿಸೈಕಲ್ ಪ್ರದರ್ಶನ ಗಳಿರಲಿವೆ.
ಹಬ್ಬದ ವಾತಾವರಣಕ್ಕೆ ಇನ್ನಷ್ಟು ಉತ್ಸಾಹ ತುಂಬಲು ಉದ್ಯಾನದಲ್ಲಿ ಆಕರ್ಷಕ ಕ್ರಿಸ್‌ಮಸ್ ಅಲಂಕಾರ, ಬೆಳಕು ಮತ್ತು ವಿಶೇಷ ಸಾಂಟಾ ಸ್ಟ್ರೀಟ್ ಪ್ರದರ್ಶನ ಇರಲಿವೆ. ಡಿ. 31ರಂದು ಹೊಸ ವರ್ಷದ ಮುನ್ನಾ ದಿನ, ಪಟಾಕಿ ಪ್ರದರ್ಶನ ಉತ್ಸವ ಕೊನೆಗೊಳ್ಳುತ್ತವೆ ಎಂದು ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ಚೀಫ್ ಆಪರೇಟಿಂಗ್ ಆಫೀಸರ್ ಧೀರನ್ ಚೌಧರಿ ತಿಳಿಸಿದ್ದಾರೆ.
ಜ. 4ರವರೆಗೆ ಆನ್‌ಲೈನ್‌ನಲ್ಲಿ ಸೀಮಿತ ಅವಧಿಯ ಕ್ರಿಸ್‌ಮಸ್ ಪಾಸ್ ಕೊಡುಗೆಯಾಗಿ ನೀಡುತ್ತಿದೆ. ಈ ಪಾಸ್ ಜ. 4ರವರೆಗೆ ಮಾನ್ಯವಾಗಿರುತ್ತವೆ. ಆನ್‌ಲೈನ್ ಬುಕ್ಕಿಂಗ್ ಪೋರ್ಟಲ್ ಬಳಸಿ ಈ ಕೊಡುಗೆ ಪಡೆಯಬಹುದು. ವಿವರಗಳಿಗೆ https://bookings.wonderla.com ಭೇಟಿ ನೀಡಬಹುದು. ಸಂಪರ್ಕ ಸಂಖ್ಯೆ: +91 80372 30333, +91 9945557777
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.