ADVERTISEMENT

ಕನಿಷ್ಠ ವೇತನ, ಉಪಧನಕ್ಕೆ ಒತ್ತಾಯ

ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಕಾರ್ಮಿಕ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಮೇ 2019, 14:18 IST
Last Updated 1 ಮೇ 2019, 14:18 IST
ಕಾರ್ಮಿಕ ದಿನಾಚರಣೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರದೀಪ್ ಮಾತನಾಡಿದರು
ಕಾರ್ಮಿಕ ದಿನಾಚರಣೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರದೀಪ್ ಮಾತನಾಡಿದರು   

ರಾಮನಗರ: ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಸಹಯೋಗದಲ್ಲಿ ಕಾರ್ಮಿಕ ದಿನವನ್ನು ಇಲ್ಲಿನ ಮಿನಿವಿಧಾನ ಸೌಧದ ಆವರಣದಲ್ಲಿ ಬುಧವಾರ ಆಚರಿಸಲಾಯಿತು.

‘ನೌಕರರಿಗೆ ₨18 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು. ಪಂಚಾಯಿತಿ ಸಿಬ್ಬಂದಿಗೆ 2018ರ ಮಾರ್ಚ್‌ನಿಂದ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಪಂಚತಂತ್ರದಲ್ಲಿ ಸೇರಿಸಿ ಇಎಫ್ಎಂಎಸ್ ಆಗಿರುವವರಿಗೆ ಸರ್ಕಾರದ ನೇರ ನಿಧಿಯಿಂದ, ಇಎಫ್ಎಂಎಸ್ ಆಗದ ಸಿಬ್ಬಂದಿಗೆ ಗ್ರಾಮ ಪಂಚಾಯಿತಿಗಳು ತನ್ನ ಸ್ವಂತ ಸಂಪನ್ಮೂಲದಿಂದ ಕಾರ್ಮಿಕ ಇಲಾಖೆ ನಿಗದಿಪಡಿಸುವ ವೇತನ ಮತ್ತು ಪಿಡಿಎ ಯನ್ನು ಕಡ್ಡಾಯವಾಗಿ ಪಾವತಿಸುವಂತೆ ಸರ್ಕಾರ ಆದೇಶಿಸಿದೆ. ಈ ಆದೇಶವನ್ನು ಪಾಲಿಸಬೇಕು’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ರಾಜಣ್ಣ ಒತ್ತಾಯಿಸಿದರು.

‘ಇಎಫ್ಎಂಎಸ್ ಗೆ ಸೇರ್ಪಡೆಯಾಗದೆ ಉಳಿದಿರುವ ಸಿಬ್ಬಂದಿಯನ್ನು ಕೂಡಲೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚತಂತ್ರದಲ್ಲಿ ಸೇರಿಸಬೇಕು. ನಿವೃತ್ತಿಯಾದವರಿಗೆ ಒಂದು ವರ್ಷದ ಸೇವೆಗೆ 15 ದಿನದಂತೆ ಅವರ ಸೇವೆಗೆ ಅನುಗುಣವಾಗಿ 15 ತಿಂಗಳು ಮೀರದಂತೆ ಉಪಧನ ನೀಡಬೇಕೆಂಬ ಆದೇಶವಿದ್ದರೂ ನಿವೃತ್ತಿಯಾದವರಿಗೆ ಉಪಧನ ನೀಡುತ್ತಿಲ್ಲ. ಕೂಡಲೆ ನಿವೃತ್ತಿಯಾದ ಸಿಬ್ಬಂದಿಗೆ ಉಪಧನ ನೀಡಬೇಕು’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರದೀಪ್ ಮಾತನಾಡಿ ಸೇವಾ ಪುಸ್ತಕವನ್ನು ತೆರೆಯಬೇಕು. ಜಿಲ್ಲಾ ಪಂಚಾಯಿತಿವತಿಯಿಂದ ಅನುಮೋದನೆಯಾಗದಿರುವ ಎಲ್ಲಾ ನೌಕರರನ್ನು ಅನುಮೋದನೆ ಮಾಡಬೇಕು. ಸೇವಾ ನಿಯಮಾವಳಿ, ಪಿಂಚಣಿ, ವೈದ್ಯಕೀಯ ವೆಚ್ಚ, ಕಂಪ್ಯೂಟರ್ ಆಪರೇಟರ್ ಗಳ ಬಡ್ತಿಗೆ ಸೇರಿಸಬೇಕು. ಗ್ರಾಮ ಪಂಚಾಯಿತಿ ನೌಕರರನ್ನು ಕಾರ್ಯದರ್ಶಿ ಗ್ರೇಡ್ ಗೆ ಮುಂಬಡ್ತಿ ನೀಡಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳಾದ ಎಂ. ನಾಗಮ್ಮ, ಜಯಣ್ಣ, ರೇಣುಕಯ್ಯ, ರಾಜಶೇಖರ, ರೇಣುಕಯ್ಯ, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.