ADVERTISEMENT

ತಂತ್ರಜ್ಞಾನದಿಂದ ನಿರಂತರ ಮಳೆ ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಶಿವಮೊಗ್ಗ: ತಂತ್ರಜ್ಞಾನ ಬೆಳವಣಿ ಗೆಯಿಂದ ಸುರಿದ ಮಳೆಯನ್ನು ಬಳಕೆ ಮಾಡಲು ಸಾಧ್ಯವೇ ವಿನಃ ಮಳೆ ನಿರಂತರವಾಗಿ ಬರುವಂತೆ ಮಾಡಲು ಸಾಧ್ಯವಿಲ್ಲ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯ ಪ್ರೊ.ಬಿ.ಎಂ. ಕುಮಾರಸ್ವಾಮಿ ಹೇಳಿದರು.

ನಗರದ ಸಿಎನ್‌ಆರ್ ಸಭಾಂಗ ಣದಲ್ಲಿ ಶುಕ್ರವಾರ ಸಹ್ಯಾದ್ರಿ ವಿಜ್ಞಾನ ಕಾಲೇಜು ಹಮ್ಮಿಕೊಂಡಿದ್ದ `ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ~ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾ ಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರು ಆಧುನಿಕತೆಗೆ ಒಳಗಾಗದೆ ಅರಣ್ಯವನ್ನೇ ದೇವ ರೆಂದು ನಂಬಿ ಪೂಜಿಸುತ್ತಾ ಬರುತ್ತಿರುವುದರಿಂದ ಇನ್ನೂ ದೇವರ ಕಾಡುಗಳು ಉಳಿದಿವೆ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಕೆ.ವಿ. ಗುರುರಾಜ್, ಸಹಾಯಕ ಪ್ರಾಧ್ಯಾಪಕ ಡಾ.ಶಶಿಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ.ಬಿ.ಆರ್. ಸಿದ್ದರಾ ಮಪ್ಪ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪರಿಸರ ನಾಗರಾಜ್ ಸ್ವಾಗತಿಸಿದರು. ಡಾ.ಕೆ. ಎಸ್. ಶೋಭಾ ಕಾರ್ಯಕ್ರಮ ನಿರೂಪಿ ಸಿದರು. ಪ್ರೇಮಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.