ADVERTISEMENT

ರಕ್ತದಾನ ಮಾಡುವುದು ಶ್ರೇಷ್ಠ ಕಾರ್ಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 5:25 IST
Last Updated 22 ಮಾರ್ಚ್ 2012, 5:25 IST

ರಿಪ್ಪನ್‌ಪೇಟೆ: ಪ್ರತಿಯೊಬ್ಬರು ರಕ್ತದಾನ ಮಾಡುವುದು ಶ್ರೇಷ್ಠ ಕಾರ್ಯ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪದ್ಮಾ ಸುರೇಶ ಹೇಳಿದರು.ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಶನಿವಾರ ಜಿಎಸ್‌ಬಿ ಸಮಾಜದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವ ರಕ್ಷಣೆಗೆ ಅನಿರೀಕ್ಷಿತ ನಡೆಯುವ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರು ಮಾಡಲು ರಕ್ತ ಅವಶ್ಯ .ಈ ನಿಟ್ಟಿನಲ್ಲಿ ಗ್ರಾಮೀಣ ಜನತೆಗೆ ಇದರ ಉಪಯೋಗ ಪಡೆಯಲು ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ತಾ.ಪಂ. ಸದಸ್ಯೆ ನಾಗರತ್ನಾ ದೇವರಾಜ್ ಮಾತನಾಡಿ, ಜನ ಪರಕಾಳಜಿಯಿಂದ ಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ನಿರ್ವಹಿಸಿದೆ ಇದರ ಸದುಪಯೋಗ ಪಡೆದುಕೊಳ್ಳಬೆಕು ಎಂದರು.ರೋಟರಿ ಅಧ್ಯಕ್ಷ ಎಂಬಿ ಲಕ್ಷ್ಮಣ್‌ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಾ ಸಮಾಜ ಮುಖಿ ಚಿಂತನೆಯಲ್ಲಿ ಶ್ರಮಿಸುವ ಸಂಸ್ಥೆಗೆ ನಾಗರಿಕರ ಸಹಕಾರ ಅತ್ಯಗತ್ಯವೆಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಎನ್. ವರ್ತೇಶ, ಶಿವಮೊಗ್ಗ ರೋಟರಿ ರಕ್ತನಿಧಿ ಡಾ.ಭಾಸ್ಕರ್ ರಾವ್, ಚರ್ಚ್ ಫಾದರ್ ವಿನ್ಸೆಂಟ್ ಹಾಜರಿದ್ದರು.ರೋಟರಿಯನ್ ಗಣೇಶ ಸ್ವಾಗತಿಸಿದರು, ರಾಧಕೃಷ್ಣ ನಿರೂಪಿಸಿದರು, ಎಲ್‌ಐಸಿ ರಾಧಕೃಷ್ಣ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.