ADVERTISEMENT

ಭದ್ರಾವತಿ ನಗರಸಭೆ ಉಪಚುನಾವಣೆ: 29ನೇ ವಾರ್ಡ್ ಜೆಡಿಎಸ್ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 2:42 IST
Last Updated 7 ಸೆಪ್ಟೆಂಬರ್ 2021, 2:42 IST
ನಾಗರತ್ನ ಅನಿಲಕುಮಾರ್
ನಾಗರತ್ನ ಅನಿಲಕುಮಾರ್   

ಭದ್ರಾವತಿ: ನಗರಸಭೆ 29ನೇ ವಾರ್ಡ್‌ನ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಗರತ್ನ ಅನಿಲಕುಮಾರ್ ವಿಜಯಿಯಾಗಿದ್ದಾರೆ.

ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಲೋಹಿತಾ ನಂಜಪ್ಪ ಅವರನ್ನು 450 ಮತಗಳ ಅಂತರದ ಸೋಲಿಸಿರುವ ನಾಗರತ್ನ ಪ್ರಥಮ ಬಾರಿಗೆ ನಗರಸಭೆ ಪ್ರವೇಶ ಪಡೆದಿದ್ದಾರೆ. ಅವರ ಪತಿ ಅನಿಲಕುಮಾರ್ ಅದೇ ಕ್ಷೇತ್ರದಿಂದ ಕಳೆದ ಬಾರಿ ನಗರಸಭಾ ಸದಸ್ಯರಾಗಿದ್ದರು.

ಅಪ್ಪಾಜಿ ನಾಮಬಲದ ಶಕ್ತಿ ಹೊಂದಿರುವ ಈ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಪ್ರಥಮ ಸುತ್ತಿನಲ್ಲೇ ಪಕ್ಷದ ಅಭ್ಯರ್ಥಿ ಮುನ್ನಡೆ ಸಾಧಿಸಿರುವ ವಿಷಯ ತಿಳಿಯುತ್ತಿದ್ದಂತೆ ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಏಣಿಕಾ ಕೇಂದ್ರದ ಮುಂಚೆ ಜಮಾಯಿಸಿ ಸಂಭ್ರಮ ಆಚರಿಸಿದರು.

ADVERTISEMENT

ನಾಗರತ್ನ ಅಧಿಕೃತ ಆಯ್ಕೆಯ ಘೋಷಣೆ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಪತ್ನಿ ಶಾರದಾ ಅಪ್ಪಾಜಿ, ಪುತ್ರ ಎಂ.ಎ.ಅಜಿತ್, ಪಕ್ಷದ ಮುಖಂಡರಾದ ಜೆ.ಪಿ.ಯೋಗೀಶ್, ಟಿ.ಡಿ.ಶ್ರೀಧರ್, ಮಾಜಿ ನಗರಸಭಾ ಸದಸ್ಯರಾದ ರಾಜು, ಬದರಿನಾರಾಯಣ, ಅನಿಲಕುಮಾರ್, ಎ.ಟಿ.ರವಿ, ಎಚ್.ಆರ್.ಲೋಕೇಶ್ವರರಾವ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.