ADVERTISEMENT

ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಬಂದ ಹೊಸ ಅತಿಥಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 5:11 IST
Last Updated 3 ಮಾರ್ಚ್ 2022, 5:11 IST
ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಕರೆತಂದಿರುವ ಹೆಣ್ಣು ಹುಲಿ ಪೂರ್ಣಿಮಾ
ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಕರೆತಂದಿರುವ ಹೆಣ್ಣು ಹುಲಿ ಪೂರ್ಣಿಮಾ   

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಹೆಣ್ಣು ಹುಲಿ (ಪೂರ್ಣಿಮಾ) ಆಗಮಿಸಿದೆ.

ಪೂರ್ಣಿಮಾ(ಹೆಣ್ಣು ಹುಲಿ)ಳನ್ನು ಮೈಸೂರು ಸಂರಕ್ಷಣಾ ಕೇಂದ್ರದಿಂದ ಕೋರಿಕೆಯ ಮೇರೆಗೆ ತರಲಾಗಿದೆ. ಇದಕ್ಕೆ 11 ವರ್ಷ ವಯಸ್ಸಾಗಿದೆ. ಪೂರ್ಣಿಮಾ ಆಗಮನದಿಂದ ಸಿಂಹಧಾಮದಲ್ಲಿ ಹುಲಿಗಳ ಸಂಖ್ಯೆ 5ರಿಂದ 6ಕ್ಕೆ ಏರಿಕೆಯಾಗಿದೆ. ಸದ್ಯ ಮೂರು ಹೆಣ್ಣು, ಮೂರು ಗಂಡು ಹುಲಿಗಳಿವೆ.

ಸಿಂಹಧಾಮದಲ್ಲಿ ರಾಮ, ಸೀತಾ, ವಿಜಯ, ದಶಮಿ, ಹನುಮ ಎಂಬ ಹುಲಿಗಳಿವೆ. ಇದರ ಜತೆಗೆ ಪೂರ್ಣಿಮಾ ಈಗ ಸೇರ್ಪಡೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.