ಸೊರಬ: ತಾಲ್ಲೂಕಿನ ಕಾಸರಗುಪ್ಪೆ ಬಳಿಯ ಬಾಳಗೋಡ ಸಮೀಪ ಕಾಡುಕೋಣ ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ.
ಶುಕ್ರವಾರ ಬೆಳಿಗ್ಗೆ 6.45ರ ವೇಳೆ ಹೊಸಬಾಳೆ– ಕಡಸೂರು ಗ್ರಾಮಗಳ ಮುಖ್ಯ ರಸ್ತೆಯ ಬಾಳಗೋಡ ಭತ್ತದ ಗದ್ದೆಯಲ್ಲಿ ಕೋಣ ಪ್ರತ್ಯಕ್ಷವಾಗಿದೆ. ಇದನ್ನು ಕಂಡ ಸ್ಥಳೀಯರು ವಿಡಿಯೊ ಚಿತ್ರೀಕರಿಸಿದ್ದಾರೆ.
‘ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು, ಬೈಕ್ ಸವಾರರು ಕಾಡುಕೋಣವನ್ನು ಗಮನಿಸಿ ವಿಡಿಯೊ ಮಾಡಿದ್ದಾರೆ. ಸಮೀಪದಲ್ಲಿದ್ದ ಜನರು, ವಾಹನ ಕಂಡರೂ ಕಾಡುಕೋಣ ಸ್ಥಳದಿಂದ ಕದಲದೆ ಗದ್ದೆಯಲ್ಲೇ ಭತ್ತ ತಿನ್ನುತ್ತಿತ್ತು. ಈ ಭಾಗದಲ್ಲಿ ಕಾಡುಕೋಣಗಳ ಹಿಂಡನ್ನು ಸಾಕಷ್ಟು ಬಾರಿ ಕಂಡಿದ್ದೇನೆ. ಗದ್ದೆಯಲ್ಲಿ ಕಾಡು ಕೋಣ ಕಂಡಿದ್ದು ಭತ್ತವನ್ನು ತಿನ್ನುತ್ತಿತ್ತು. ರೈತರ ಗದ್ದೆಯಲ್ಲಿನ ಭತ್ತವನ್ನು ಹಾಳು ಮಾಡುತ್ತಿವೆ. ಕೂಡಲೇ ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಉಪಟಳಕ್ಕೆ ಕ್ರಮ ಕೈಗೊಳ್ಳಬೇಕಿದೆ’ ಎಂದು ಗ್ರಾಮದ ಪ್ರತ್ಯಕ್ಷದರ್ಶಿ ರಾಘವೇಂದ್ರ ಕೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.