ತುಮರಿ: ಸಮೀಪದ ಎಸ್.ಎಸ್. ಭೋಗ್ ಗ್ರಾಮ ಪಂಚಾಯಿತಿ ಹಾಗೂ ಭಾರತೀಯ ಅಂಚೆ ಇಲಾಖೆ ಸಾಗರ ಉಪ ವಿಭಾಗದ ಸಹಯೋಗದಲ್ಲಿ ಸೆಪ್ಟೆಂಬರ್ 18, 19ರಂದು ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಶಿಬಿರ ಹಾಗೂ ಅಂಚೆ ಜನ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಎಸ್.ಎಸ್. ಭೋಗ್ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶಿಬಿರ ನಡೆಯಲಿದೆ. 10 ವರ್ಷದ ಹಿಂದಿನ ಆಧಾರ್ ಕಾರ್ಡ್ ನವೀಕರಣ, ತಿದ್ದುಪಡಿ, ಹೆಸರು ಬದಲಾವಣೆ, ಮೊಬೈಲ್ ಸಂಖ್ಯೆ ಜೋಡಣೆ ಮಾಡಬಹುದು. ಅಂಚೆ ಜನ ಸಂಪರ್ಕ ಅಭಿಯಾನದಡಿಯಲ್ಲಿ ಸಮೂಹ ಅಪಫಾತ ವಿಮೆ, ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆ, ಸುಕುಮಾರ ಸಮೃದ್ಧಿ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ನೋಂದಣಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.