ADVERTISEMENT

ಆಕಾಶವಾಣಿ ವಜ್ರಮಹೋತ್ಸವ: ಸಣ್ಣ ಕಥೆ, ಪಾಕಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 14:26 IST
Last Updated 11 ಜನವರಿ 2025, 14:26 IST

ಭದ್ರಾವತಿ: ಆಕಾಶವಾಣಿ ಭದ್ರಾವತಿಯ ವಜ್ರಮಹೋತ್ಸವ ಫೆ.7ರಂದು ನಡೆಯುತ್ತಿದೆ. ಅದರ ಸ್ಮರಣೆಗಾಗಿ ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೇಳುಗರಿಗೆ ಸಣ್ಣಕಥೆ ಹಾಗೂ ಪಾಕಸ್ಪರ್ಧೆ ಏರ್ಪಡಿಸಲಾಗಿದೆ.

16 ವರ್ಷ ಮೇಲ್ಪಟ್ಟ ಆಸಕ್ತರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಾರ್ವಜನಿಕರು ಜನವರಿ 25ರ ಒಳಗೆ 4 ಪುಟಕ್ಕೆ ಮೀರದಂತೆ (500 ಶಬ್ದ) ಸಣ್ಣ ಕಥೆಯನ್ನು ಬರೆಯಬಹುದು ಹಾಗೂ ವಿವಿಧ ರೀತಿಯ ಖಾದ್ಯ, ಭಕ್ಷ್ಯಗಳನ್ನು ತಯಾರಿಸುವ ಸಾಮಗ್ರಿ ಹಾಗೂ ವಿಧಾನ ಒಳಗೊಂಡ ಲೇಖನವನ್ನು ಬರೆದು ನಿಲಯ ನಿರ್ದೇಶಕರು, ಆಕಾಶವಾಣಿ, ಜೆ.ಪಿ.ಎಸ್.ಕಾಲೋನಿ, ಭದ್ರಾವತಿ 577302 ವಿಳಾಸಕ್ಕೆ ಕಳುಹಿಸಬಹುದು. ಇಲ್ಲವೆ ಇ-ಮೇಲ್ airbdvt@gmail.com ಗೆ ಕಳುಹಿಸಬಹುದು. ಮೊದಲ 3 ಸ್ಥಾನಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಆಕಾಶವಾಣಿ ಭದ್ರಾವತಿ ಕೇಂದ್ರದ ಮುಖ್ಯಸ್ಥ ಎಸ್.ಆರ್.ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಜ.14ಕ್ಕೆ: ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಭದ್ರಾವತಿ ಆಕಾಶವಾಣಿಯ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲೆಯ ಅಭಿವೃದ್ಧಿಗೆ ಕೈಗೊಂಡ ಕಾರ್ಯಕ್ರಮದ ಚಿತ್ರಣ ನೀಡಲಿದ್ದಾರೆ. ಜ.14ರ ಮಂಗಳವಾರ ಬೆಳಿಗ್ಗೆ 9.15 ರಿಂದ 10 ಗಂಟೆಯವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.