ಪ್ರಾತಿನಿಧಿಕ ಚಿತ್ರ
ಕೃಪೆ: Gemini AI
ಶಿವಮೊಗ್ಗ: ಅಮೃತ ಅನ್ನದಾಸೋಹ ಪ್ರತಿಷ್ಠಾನಕ್ಕೆ 100 ದಿನದ ಸಂಭ್ರಮದ ಅಂಗವಾಗಿ ಆ. 29ರ ಬೆಳಿಗ್ಗೆ 11.30ಕ್ಕೆ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎ. ಸತೀಶ್ ಕುಮಾರ್ ಶೆಟ್ಟಿ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾರಕ್ಕೆ ಎರಡು ದಿನ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಹಸಿದವರಿಗಾಗಿ ಅನ್ನ ನೀಡುವ ಈ ಯೋಜನೆ ಕಳೆದ ಸೆಪ್ಟೆಂಬರ್‌ನಲ್ಲಿ ಆರಂಭವಾಗಿತ್ತು. ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಊಟ ಸಿಗುತ್ತದೆ. ಆದರೆ, ಅವರನ್ನು ನೋಡಿಕೊಳ್ಳಲು ಬಂದವರಿಗೆ ಊಟ ಇರುವುದಿಲ್ಲ. ಅಲ್ಲಿಗೆ ಬರುವವರು ತುಂಬಾ ಬಡವರಾಗಿರುತ್ತಾರೆ. ಎಷ್ಟೋ ಬಾರಿ ಮಧ್ಯಾಹ್ನ ಅವರು ಊಟವನ್ನೇ ಮಾಡುವುದಿಲ್ಲ. ಇದನ್ನು ಗಮನಿಸಿ ಪ್ರತಿಷ್ಠಾನ ಅನ್ನದಾಸೋಹ ಯೋಜನೆ ಪ್ರಾರಂಭ ಮಾಡಿದೆ ಎಂದರು. ದಾಸೋಹದ ಖರ್ಚು ಒಂದು ದಿನಕ್ಕೆ ₹15,000 ಬರುತ್ತದೆ. ಅದರಲ್ಲಿ ದಾನಿಗಳು ₹5,000 ಕೊಡಬಹುದಾಗಿದೆ’ ಎಂದರು.
ಕಾರ್ಯಕ್ರಮದ ಸಾನಿಧ್ಯ ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ವಹಿಸುವರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಉದ್ಘಾಟಿಸುವರು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.