ADVERTISEMENT

ತೀರ್ಥಹಳ್ಳಿ | ಅಡಿಕೆಗೆ ಕಾಂಡ ಕೊರಕ ಬಾಧೆ; ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 5:07 IST
Last Updated 19 ನವೆಂಬರ್ 2022, 5:07 IST
ತೂದೂರು ಗ್ರಾಮ ಪಂಚಾಯಿತಿಯಲ್ಲಿ ಕಾಣಿಸಿಕೊಂಡ ಹೊಸ ರೋಗ.
ತೂದೂರು ಗ್ರಾಮ ಪಂಚಾಯಿತಿಯಲ್ಲಿ ಕಾಣಿಸಿಕೊಂಡ ಹೊಸ ರೋಗ.   

ತೀರ್ಥಹಳ್ಳಿ: ಮಲೆನಾಡಿನ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಎಲೆಚುಕ್ಕಿ, ಹಿಡಿಮುಂಡಿಗೆ, ಹಿಂಗಾರ ಒಣಗುವ ರೋಗಗಳಿಂದ ಕಂಗಾಲಾಗಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಇನ್ನಷ್ಟು ಭೀತಿ ಹೆಚ್ಚಿಸಿದೆ.

ತಾಲ್ಲೂಕಿನ ತೂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ತೋಟಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. 3ರಿಂದ 4 ವರ್ಷಗಳ ಗಿಡಗಳು ಹುಳುಗಳ ಬಾಧೆಗೆ
ಒಣಗಿ ಬುಡ
ಮೇಲಾಗುತ್ತಿವೆ. ರೋಗ ತಗುಲಿರುವ ಸಸಿಗಳಲ್ಲಿ ಅಂಟಿನ ಅಂಶಗಳ ಮೂಲಕ ಗಮ್‌ ರೀತಿ ಕಾಣಿಸಿಕೊಳ್ಳುತ್ತದೆ. ಅಂಟಿನ ಅಂಶದ ಕೆಳಗೆ ರಂಧ್ರಗಳು ನಿರ್ಮಾಣವಾಗಿರುವುದನ್ನು ರೈತರು ಗುರುತಿಸಬೇಕು.

ಸ್ಥಳಕ್ಕೆ ತೋಟಗಾರಿಕೆ
ಇಲಾಖೆ, ಕೃಷಿ ಮತ್ತು ಸೀಬಿನಕೆರೆ ತೋಟಗಾರಿಕಾ ಸಂಶೋಧನಾ
ಕೇಂದ್ರದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕವಾಗಿ ಇದು ರಂಧ್ರ ಕೊರೆಯುವ ಹುಳು ಎಂದು ಗುರುತಿಸಲಾಗಿದೆ. ಸದ್ಯ ನಿಯಂತ್ರಣಕ್ಕೆ ಕ್ಲೋರೊಫಿರಫಸ್‌ 20ಇಸಿ - 3ಮಿ.ಲೀ ಪ್ರತಿ ಲೀಟರ್‌ ನೀರಿಗೆ ಬೆರೆಸಿ
ಕಾಂಡಕ್ಕೆ ಉಪಚಾರ ಮಾಡುವ ಮೂಲಕ ನಿಯಂತ್ರಿಸಬಹುದು.
15 ದಿನಗಳ ನಂತರ ಇದೆ
ದ್ರಾವಣದಲ್ಲಿ ಬಟ್ಟೆಯನ್ನು ನೆನೆಸಿ ಕೀಟದಿಂದ ಭಾದೆಗೊಳಗಾದ ಅಡಿಕೆ ಕಾಂಡದ ಸುತ್ತಲು
ಕಟ್ಟಬೇಕು ಅಥವಾ ಹನಿಯಾಗಿರುವ ಕಾಂಡಗಳಿಗೆ ಔಷಧಿಯನ್ನು ಬಳಿಯಬೇಕು ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.