ADVERTISEMENT

ಸಾಮೂಹಿಕ ಮಹೋತ್ಸವದಲ್ಲಿ ಆಯನೂರು ಪುತ್ರಿ ವಿವಾಹ

ಅಂತರಜಾತಿ, ವಿಧವೆಯರಿಗೂ ಕಲ್ಯಾಣ ಭಾಗ್ಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 13:28 IST
Last Updated 21 ಜನವರಿ 2020, 13:28 IST

ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪುತ್ರಿಶಮಾತ್ಮಿಕ ಅವರ ವಿವಾಹ ಜ.30ರಂದು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಜರುಗಲಿದೆ.

ಸಾಗರ ರಸ್ತೆಯ ಪೆಸಿಟ್‌ ಕಾಲೇಜು ಆವರಣದ ಪ್ರೇರಣಾ ಸಭಾಂಗಣದಲ್ಲಿ ಅಂದು 10.30ರಿಂದ 11.30ರ ವರೆಗೆ ನಡೆಯುವ 51 ಜೋಡಿ ವಧು–ವರರ ವಿವಾಹ ಮಹೋತ್ಸವದಲ್ಲಿ ಮಹೇಂದ್ರ ಅವರ ಜತೆ ಶಮಾತ್ಮಿಕ ವಿವಾಹವಾಗುತ್ತಿದ್ದಾರೆ. ಈ ಮಹೋತ್ಸವದಲ್ಲೇ ಅಂತರಜಾತಿ, ವಿಧವಾ ಜೋಡಿಗಳು ಹಸೆಮಣೆ ಏರುತ್ತಿರುವುದು ವಿಶೇಷ ಎಂದುಆಯನೂರಿನ ಧರ್ಮಶ್ರೀ ಸೇವಾ ಟ್ರಸ್ಟ್ ಅಧ್ಯಕ್ಷೆ ಮಂಜುಳಾ ಆಯನೂರು ಮಂಜುನಾಥ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ಬೆಳಿಗ್ಗೆ ಸಲ್ಲುವ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ಜರುಗಲಿದೆ. ಎಲ್ಲರ ಬೆಂಬಲದೊಂದಿಗೆ ಈ ಮುಹೋತ್ಸವ ನಡೆಯಲಿದೆ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, 33 ಜೋಡಿ ಪರಿಶಿಷ್ಟ ಜಾತಿಗೆ ಸೇರಿದವರು. ಎರಡು ಮರಾಠಿ, ಮೂರು ಕುರುಬ, ಎರಡು ವೀರಶೈವ, ಒಂದು ಜೋಡಿ ಉಪ್ಪಾರ ಹಾಗೂ ಇತರೆ ಸಮುದಾಯಕ್ಕೆ ಸೇರಿದವರಾಗಿದ್ದಾರೆ.ಶೇ 90ರಷ್ಟು ಕಡುಬಡವರೇ ಇದ್ದಾರೆ.ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ದಾಖಲೆಗಳನ್ನುಪರಿಶೀಲಿಸಿ, ಹೆಸರುನೋಂದಾಯಿಸಿಕೊಳ್ಳಲಾಗಿದೆ.ನೂತನ ಜೋಡಿಗಳಿಗೆ ಹಾಗೂ ವಧು-ವರನ ತಂದೆ-ತಾಯಿಗೆ ಬಟ್ಟೆ ನೀಡಲಾಗಿದೆ. ವಧುವಿಗೆ ತಾಳಿ ಮತ್ತು ಕಾಲುಂಗುರ ನೀಡಲಾಗುವುದು. ಸಮಾನತೆಗೆ ಆದ್ಯತೆ ನೀಡಲಾಗಿದೆ. ಊಟ, ಉಪಚಾರದಲ್ಲೂ ವ್ಯತ್ಯಾಸವಿಲ್ಲ ಎಂದು ವಿವರ ನೀಡಿದರು.

ಆದಿಚುಂಚನಗಿರಿ ಶ್ರೀ, ಮಾದಾರ ಚನ್ನಯ್ಯ ಶ್ರೀ, ಮಳಲಿ ಮಠ ಶ್ರೀ, ಬೆಕ್ಕಿನ ಕಲ್ಮಠ ಶ್ರೀ,ಭಗೀರಥನಾಂದ ಶ್ರೀ, ಬಸವಶ್ರೀಸಾನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಎಂ.ಎಸ್.ಮಹೇಂದ್ರನಾಥ್, ಹಿರಣ್ಣಯ್ಯ, ಬಿ.ಟಿ.ಈಶ್ವರಪ್ಪ, ಆಯನೂರು ಸಂತೋಷ್, ಶಶಿಧರ್, ಬೆಲಗೂರು ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.