
ಪ್ರಜಾವಾಣಿ ವಾರ್ತೆ
ಭದ್ರಾವತಿ: ದೊಣಬಘಟ್ಟ ರಸ್ತೆಯ ಸೇತುವೆ ಸಮಸ್ಯೆ ಇದೀಗ ಬಗೆಹರಿದಿದ್ದು, ₹ 5 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಗೊಳ್ಳುತ್ತಿದೆ.
ಮಳೆಗಾಲದಲ್ಲಿ ಸೇತುವೆ ಮುಳುಗಡೆಯಿಂದ ಉಂಟಾಗುತ್ತಿದ್ದ ಸಮಸ್ಯೆ ಇದೀಗ ನೂತನ ಸೇತುವೆಯಿಂದ ಬಗೆಹರಿಯಲಿದೆ.
ನೂತನ ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಈ ಭಾಗದ ನಿವಾಸಿಗಳು ಜಿಲ್ಲಾಡಳಿತ ಹಾಗೂ ಶಾಸಕರಿಗೆ ಒತ್ತಾಯಿಸುತ್ತಿದ್ದರು. ಅಪೆಂಡಿಕ್ಸ್ ಅನುದಾನ ₹ 5 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಈ ಸೇತುವೆ ನಿರ್ಮಿಸುತ್ತಿದೆ.
ಈಗಿರುವ ಸೇತುವೆಗಿಂತ 6 ಅಡಿ ಎತ್ತರ, 40 ಮೀಟರ್ ಉದ್ದದಲ್ಲಿ ನೂತನ ಸೇತುವೆ ನಿರ್ಮಾಣವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.