ADVERTISEMENT

ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ

ಕಚೇರಿಯ ಅಧೀನ ಸಿಬ್ಬಂದಿಯಿಂದ ₹1 ಲಕ್ಷ ಲಂಚ ಪಡೆಯುವ ವೇಳೆ ದಾಳಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 4:10 IST
Last Updated 4 ಮಾರ್ಚ್ 2026, 4:10 IST
ಎ.ಕೆ.ನಾಗೇಂದ್ರಪ್ಪ
ಎ.ಕೆ.ನಾಗೇಂದ್ರಪ್ಪ   

ಶಿವಮೊಗ್ಗ: ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಭತ್ಯೆಗಳನ್ನು ಕೊಡಿಸಲು ಕಚೇರಿಯ ಅಧೀನ ಸಿಬ್ಬಂದಿಯಿಂದ ₹1 ಲಕ್ಷ ಲಂಚ ಪಡೆಯುವಾಗ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಹಾಗೂ ಮಧ್ಯವರ್ತಿ ಮಂಜುನಾಥ ಅವರನ್ನು ಸೋಮವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ಬಿಇಒ ಕಚೇರಿಯಲ್ಲಿ ಅಧೀಕ್ಷಕ ಆಗಿದ್ದ ಲಿಂಗರಾಜು ಅವರಿಗೆ 2011ರಿಂದ ತಾಂತ್ರಿಕ ಕಾರಣಗಳಿಂದ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಭತ್ಯೆ ನೀಡಿರಲಿಲ್ಲ. ಅದಕ್ಕಾಗಿ ಮನವಿ ಸಲ್ಲಿಸಿದ್ದರು. ಬಿಇಒ, ಮಧ್ಯವರ್ತಿ ಮಂಜುನಾಥ ಮೂಲಕ ₹4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ದೂರು ನೀಡಲಾಗಿತ್ತು.

ಲಂಚದ ಭಾಗವಾಗಿ ಕಚೇರಿಯಲ್ಲಿ ₹1 ಲಕ್ಷ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್‌ ನೇತೃತ್ವದ ತಂಡ ದಾಳಿ ನಡೆಸಿ ಹಣದ ಸಮೇತ ಬಂಧಿಸಿದೆ. ಮಂಜುನಾಥ ಆರ್‌ಟಿಐ ಕಾರ್ಯಕರ್ತ ಹಾಗೂ ಪತ್ರಕರ್ತ ಎಂದು ಹೇಳಿಕೊಂಡಿದ್ದು, ತನಿಖೆ ನಡೆದಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. 

ADVERTISEMENT
ಮಂಜುನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.