ADVERTISEMENT

ಮತ ಹಾಕಲು ಮಾರಿಷಸ್‌ನಿಂದ ಬಂದರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 14:12 IST
Last Updated 23 ಏಪ್ರಿಲ್ 2019, 14:12 IST
ಮತ ಹಾಕಲು ಮಾರಿಷಸ್‌ನಿಂದ ಹೊಸಪೇಟೆಗೆ ಬಂದ ರಮೇಶ್‌ ಬುಂದಿ ಹಾಗೂ ಅವರ ಮಡದಿ ಸಪ್ನಾ ಬುಂದಿ
ಮತ ಹಾಕಲು ಮಾರಿಷಸ್‌ನಿಂದ ಹೊಸಪೇಟೆಗೆ ಬಂದ ರಮೇಶ್‌ ಬುಂದಿ ಹಾಗೂ ಅವರ ಮಡದಿ ಸಪ್ನಾ ಬುಂದಿ   

ಹೊಸಪೇಟೆ: ರಮೇಶ್‌ ಬುಂದಿ ಹಾಗೂ ಅವರ ಪತ್ನಿ ಸಪ್ನಾ ಬುಂದಿ ಎಂಬುವರು ಮಂಗಳವಾರ ಮಾರಿಷಸ್‌ನಿಂದ ನಗರಕ್ಕೆ ಬಂದು ಮತ ಹಾಕಿದರು.

ನಗರದ 16ನೇ ವಾರ್ಡಿನ ಅಲ್‌ ಅಮೀನ್‌ ಉರ್ದು ಶಾಲೆಯ ‘ಸಖಿ’ ಮತಗಟ್ಟೆ ಸಂಖ್ಯೆ 77ರಲ್ಲಿ ಇಬ್ಬರು ಹಕ್ಕು ಚಲಾಯಿಸಿದರು.

ರಮೇಶ್‌ ಬುಂದಿ ಅವರು 20 ವರ್ಷಗಳಿಂದ ಮಾರಿಷಸ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ಮುಖ್ಯ ಬಾಣಸಿಗರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರೇ ಹೇಳುವ ಪ್ರಕಾರ, ಪ್ರತಿ ಸಾರ್ವತ್ರಿಕ ಚುನಾವಣೆಗೆ ಹೆಂಡತಿ ಜತೆಗೆ ಊರಿಗೆ ಬಂದು ತಪ್ಪದೇ ಮತ ಚಲಾಯಿಸುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.