ಹೊಳೆಹೊನ್ನೂರು: ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಾಗಿ ಮೂರು ವರ್ಷಗಳ ಅವಧಿಯಲ್ಲಿ ತಲಾ ಒಮ್ಮೊಮ್ಮೆ ಇಬ್ಬರು ಶಾಸಕರು ಭೂಮಿ ಪೂಜೆ ಮಾಡಿದ್ದರೂ ಕಾಮಗಾರಿ ಮುಂದೆ ಸಾಗಿಲ್ಲ. ಇದರಿಂದಾಗಿ, ‘ಅಭಿವೃದ್ಧಿ ಕಾರ್ಯಕ್ಕೆ ನಿರ್ಲಕ್ಷ್ಯವೇಕೆ?’ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಪಟ್ಟಣದಲ್ಲಿ ಹಾದು ಹೋಗಿರುವ ಚನ್ನಗಿರಿ ರಸ್ತೆಯನ್ನು ಬೈಪಾಸ್‌ವರೆಗೆ ಅಭಿವೃದ್ಧಿಪಡಿಸುವ ₹ 4.75 ಕೋಟಿ ವೆಚ್ಚದ ಕಾಮಗಾರಿಗೆ ಚುನಾವಣೆಯ ಹೊಸ್ತಿನಲ್ಲಿ ಆಗಿನ ಶಾಸಕ ಕೆ.ಬಿ. ಅಶೋಕ ನಾಯ್ಕ ಭೂಮಿಪೂಜೆ ಮಾಡಿದ್ದರು. ವರ್ಷದ ಹಿಂದೆ ಈಗಿನ ಶಾಸಕಿ ಶಾರದಾ ಪೂರ‍್ಯಾನಾಯ್ಕ ಅವರೂ ಕಾಮಗಾರಿಗೆ ಚಾಲನೆ ನೀಡಿದ್ದರು. ಬೈಪಾಸ್‌ನಿಂದ ಕಾಮಗಾರಿ ಆರಂಭ ಮಾಡಿ ಸ್ಪಲ್ಪದೂರ ಸೇತುವೆಗಾಗಿ ತಗ್ಗು ತೆಗೆದು ಅರ್ಧಕ್ಕೆ ನಿಲ್ಲಿಸಲಾಗಿದೆ.
ಪಟ್ಟಣದಲ್ಲಿ ಹಾದುಹೋಗಿರುವ ಈ ರಸ್ತೆ ಕಿರಿದಾಗಿದ್ದು, ರಸ್ತೆಯ ಮಧ್ಯದಿಂದ ಸುಮಾರು 12 ಮೀಟರ್ ವಿಸ್ತರಣೆ ಮಾಡುವುದರಿಂದ ಎರಡೂ ಬದಿಯ ಕೆಲವು ಮನೆ ಹಾಗೂ ಅಂಗಡಿಗಳ ತೆರವು ಹಾಗೂ ವಿದ್ಯುತ್ ಕಂಬಗಳು ಸ್ಥಳಾಂತರಿಸಬೇಕಾಗಿದೆ. ಅಲ್ಲದೇ ಬಸ್ ನಿಲ್ದಾಣ ಕಟ್ಟಡ ನಿರ್ಮಾಣ, ರಸ್ತೆ ಅಭಿವೃದ್ಧಿಗಾಗಿ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿದೆ. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪಟ್ಟಣ ಪಂಚಾಯಿತಿಯು ಕಾಮಗಾರಿಗೆ ಸೂಕ್ತ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಹಾಗೂ ಪ್ರಭಾವಿ ವ್ಯಕ್ತಿಗಳ ಮಾತಿಗೆ ಮಣೆ ಹಾಕುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಈ ರಸ್ತೆಯಲ್ಲಿ 4 ಶಾಲೆಗಳಿದ್ದು, ನಿತ್ಯ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ವಾಹನ ದಟ್ಟಣೆಯೂ ಹೆಚ್ಚಾಗಿದ್ದು, ಆಗಾಗ ಸಣ್ಣ–ಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂಬುದು ಪಾಲಕರು ಆಗ್ರಹವಾಗಿದೆ.
ಪಾರ್ಕಿಂಗ್ ಸಮಸ್ಯೆ: ರಸ್ತೆ ಕಿರಿದಾಗಿದ್ದು ವಾಹನ ಸವಾರರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವಾಗ ರಸ್ತೆಯ ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸುತ್ತಾರೆ. ದಾವಣಗೆರೆ, ಚಿತ್ರದುರ್ಗ, ಸಾಸ್ವೇಹಳ್ಳಿ ಕಡೆ ತೆರಗುವ ಬಸ್‌ಗಳನ್ನು ನಿಲ್ಲಿಸುವುದರಿಂದ ಸಂಚಾಶರ ದಟ್ಟಣೆಯೂ ಆಗುತ್ತಿದೆ. ಮೂರು ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
‘ಸ್ವಲ್ಪದೂರ ಕಾಲುವೆ ನಿರ್ಮಾಣ ಮಾಡಿ ಗುತ್ತಿಗೆದಾರ ಬಿಟ್ಟು ಹೋಗಿದ್ದು, ಕಾಲುವೆಯಲ್ಲಿ ನೀರು ಸಂಗ್ರಹವಾಗಿ ಸುತ್ತಮುತ್ತಲಿನ ಮನೆಗಳಿಗೆ ಸೊಳ್ಳೆಗಳ ಕಾಟ ಹೆಚ್ಚಿದ್ದಲ್ಲದೆ, ದುರ್ವಾಸನೆಯೂ ಹೆಚ್ಚಿ ಹಲವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಲುವೆಯನ್ನು ಮುಚ್ಚಿ ಇಲ್ಲವೇ ಕಾಮಗಾರಿಯನ್ನು ಪೂರ್ಣಗೊಳಿಸಿ’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
‘ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಸಿ, ಕಾಮಗಾರಿಯನ್ನು ಮುಂದುವರಿಸುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವೇ ಗುತ್ತಿಗೆದಾರರನ್ನು ಬದಲಾಯಿಸಬೇಕು’ ಎಂಬುದು ಅವರ ಒತ್ತಾಯವಾಗಿದೆ.
ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಅಸಮಾಧಾನವನ್ನೂ ಜನರು ಹೊರಹಾಕಿದ್ದಾರೆ.
ಶಾಸಕರು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ನಿರಾಸಕ್ತಿ ತಾತ್ಸಾರ ಮನೋಭಾವನೆ ವಹಿಸಿದಂತಿದೆ. ರಸ್ತೆಯ ವಿಸ್ತರಣೆ ಹಾಗೂ ಅಭಿವೃದ್ದಿಯನ್ನು ಬೇಗ ಪೂರ್ಣಗೊಳಿಸಬೇಕು. ವಾಹನ ಸವಾರರಿಗೆ ಅನುವು ಮಾಡಿಕೊಡಬೇಕುವೆಂಕಟೇಶ್ ಗ್ರಾಮಸ್ಥ
ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನಮಗೆ ಕೆಲಸ ನಿರ್ವಹಿಸಲು ಸರಿಯಾದ ವ್ಯವಸ್ಥೆ ಮಾಡಿಕೊಟ್ಟರೇ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದುವಿಜಯ್ ಪಾಟೀಲ್ ಗುತ್ತಿಗೆದಾರ
ಹೊಳೆಹೊನ್ನೂರು: ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಕಾಮಗಾರಿಗೆ ಚಾಲನೆ ನೀಡಿದರೂ ಕಾಮಗಾರಿ ಪ್ರಾರಂಭಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿರುವುದು ವಿಪರ್ಯಸವೇ ಸರಿ. ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಆರೋಪ ಕೇಳಿಬರುತ್ತಿದೆ.
ಪಟ್ಟಣದಲ್ಲಿ ಹಾದು ಹೋಗುವ ಚನ್ನಗಿರಿ ರಸ್ತೆಯನ್ನು ಬೈಪಾಸ್ ರಸ್ತೆಯವರೆಗೆ ಅಭಿವೃದ್ಧಿ ಹಾಗೂ ಅಗಲೀಕರಣದ ಕಾಮಗಾರಿಗೆ ರೂ. 4 ಕೋಟಿ 75 ಲಕ್ಷ ವೆಚ್ಚದಲ್ಲಿ ಕಳೆದ ಸರ್ಕಾರದ ಅವಧಿಯಲ್ಲಿ ಚುನಾವಣೆಯ ಹೊಸ್ತಿನಲ್ಲಿ ಆಗಿನ ಶಾಸಕ ಕೆ.ಬಿ. ಅಶೋಕನಾಯ್ಕ ಗುದ್ದಲಿ ಪೂಜೆ ನೆರವೇರಿಸಿದ್ದರು. ಷದ
ಹಿಂದೆ ಹಾಲಿ ಶಾಸಕಿ ಶಾರದ ಪೂರ್ಯನಾಯ್ಕ ಈ ಕಾಮಗಾರಿಗೆ ಚಾಲನೆ ನೀಡಿದರೂ ಬೈಪಾಸ್ ರಸ್ತೆಯಿಂದ ಕಾಮಗಾರಿ ಪ್ರಾರಂಭ ಮಾಡಿ ಸ್ಪಲ್ಪದೂರ ಕಾಲುವೆಯನ್ನು ತೆಗೆದು ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಪಟ್ಟಣದಲ್ಲಿ ಹಾದುಹೋಗುವ ರಸ್ತೆಯು ಕಿರಿಯದಾಗಿದ್ದು ರಸ್ತೆಯ ಮಧ್ಯೆದಿಂದ ಸುಮಾರು 12 ಮೀಟರ್ ಅಗಲೀಕರಣ ಮಾಡುವುದರಿಂದ ಪಕ್ಕದಲ್ಲಿರುವ ಕೆಲವು ಮನೆ ಹಾಗೂ ಅಂಗಡಿಗಳ ತೆರವುಗೊಳಿಸಬೇಕಾಗಿದೆ. ವಿದ್ಯುತ್ ಕಂಬಗಳು ಸ್ಥಳಾಂತರಿಸಬೇಕಾಗಿದೆ.
ಚನ್ನಗಿರಿಯ ರಸ್ತೆ ಬಸ್ ನಿಲ್ದಾಣ ನಿರ್ಮಾಣ ರಸ್ತೆಯ ಅಭಿವೃದ್ಧಿಗೆ ಕಟ್ಟಡಗಳನ್ನು ನೆಲಸಮಗೊಳಿಸಬೇಕಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪಟ್ಟಣ ಪಂಚಾಯಿತಿ ಕಾಮಗಾರಿಗೆ ಸೂಕ್ತ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳತ್ತಿಲ್ಲ ಹಾಗೂ ಪ್ರಭಾವಿ ವ್ಯಕ್ತಿಗಳ ಮಾತಿಗೆ ಮಣೆ ಹಾಕುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಈ ರಸ್ತೆಯಲ್ಲಿ 4 ಶಾಲೆಗಳಿದ್ದು ಪ್ರತಿನಿತ್ಯ ನೂರಾರು ಮಕ್ಕಳು ಶಾಲೆಗೆ ಹೋಗುತ್ತಿದ್ದು ಈ ರಸ್ತೆಯಲ್ಲಿ ವಾಹನ ಸಂಚಾರ ದಟ್ಟವಾಗಿದ್ದು ಆಗಾಗ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದು ರಸ್ತೆಯನ್ನು ಕೂಡಲೇ ಪೂರ್ಣಗೊಳಿಸಬೇಕೆಂದು ಶಾಲಾ ಮಕ್ಕಳ ಪೋಷಕರ ಆಗ್ರಹವಾಗಿದೆ. ಪಾರ್ಕಿಂಗ್ ಸಮಸ್ಯೆ: ರಸ್ತೆ ಕಿರಿದಾಗಿದ್ದು ವಾಹನ ಸವಾರರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಹೋಗುವಾಗ ರಸ್ತೆಯ ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಹಾಗೂ ದಾವಣಗೆರೆ ಚಿತ್ರದುರ್ಗ ಸಾಸ್ವೇಹಳ್ಳಿ ಹೋಗುವ ಬಸ್ಸುಗಳು ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಕೂಡ ಆಗುತ್ತಿದೆ. ಕಳೆದ ಮೂರು ವರ್ಷಗಳಿಂದ ಕಾಮಗಾರಿ ನೆನಗುದಿಗೆ ಬೀಳುತ್ತಿದ್ದು ಗುತ್ತಿಗೆದಾರ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.
ಸ್ವಲ್ಪದೂರ ಕಾಲುವೆ ನಿರ್ಮಾಣ ಮಾಡಿ ಗುತ್ತಿಗೆದಾರ ಬಿಟ್ಟು ಹೋಗಿದ್ದು ಕಾಲುವೆಯಲ್ಲಿ ನೀರು ಸಂಗ್ರಹವಾಗಿದ್ದು ಸುತ್ತಮುತ್ತಲಿನ ಮನೆಗಳಿಗೆ ಸೊಳ್ಳೆಗಳ ಕಾಟ ಜೊತೆಗೆ ದುರ್ವಾಸನೆಯ ಬಿಟ್ಟಿಭಾಗ್ಯ ದೊರೆಯುತ್ತಿದೆ. ಆರೋಗ್ಯದಲ್ಲಿ ಏರು ಪೇರಾಗಿದ್ದು ದಿನನಿತ್ಯ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಲುವೆಯನ್ನು ಮುಚ್ಚಿ ಇಲ್ಲವಾದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಮಂಜೂರಾಗಿರುವ ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ. ಶಾಸಕರು ಸಂಬಂಧಪಟ್ಟ ಅಧಿಕಾರಿಗಳು ಕೈಕಟ್ಟಿ ಕುಳಿತುರುವಂತೆ ಕಾಣುತ್ತಿದೆ. ಗುತ್ತಿಗೆದಾರಿನಿಗೆ ಬಿಸಿಮುಟ್ಟಿಸಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಇಲ್ಲವಾದಲ್ಲಿ ಗುತ್ತಿಗೆದಾರರನ್ನು ಬದಲಾಯಿಸಬೇಕು. ತಕ್ಷಣವೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಅಧಿಕಾರಿಗಳ ಬೇಜಾಬ್ದಾರಿಯಿಂದಾಗಿ ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಶಾಸಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಟ್ಟಣ ಅಭಿವೃದ್ಧಿ ಕುಂಟಿತವಾಗಿದೆ. ಕೂಡಲೇ ಎಚ್ಚೆತ್ತು ಅಭಿವೃದ್ಧಿಗೆ ಹೆಚ್ಚಿಗೆ ಹೊತ್ತು ನೀಡಿ ಮಾದರಿ ಪಟ್ಟಣವಾಗಿ ಮಾಡುವುದರಲ್ಲಿ ಆಸಕ್ತರಾಗಬೇಕೆಂದು ಜನಸಾಮಾನ್ಯರ ಅಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.