ADVERTISEMENT

ಶಿವಮೊಗ್ಗ: ರಾಜಕಾಲುವೆಯಲ್ಲಿ ಮಗುವಿನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಮೇ 2022, 4:33 IST
Last Updated 21 ಮೇ 2022, 4:33 IST

ಶಿವಮೊಗ್ಗ: ನಿರಂತರ ಮಳೆಯಿಂದ ತುಂಬಿ ಹರಿಯುತ್ತಿದ್ದ ಆರ್‌ಎಂಎಲ್ ನಗರದ ರಾಜಕಾಲುವೆಯಲ್ಲಿ ಒಂದು ತಿಂಗಳ ಮಗುವೊಂದು ತೇಲಿಬಂದಿದೆ.

ಮಳೆ ಹಾನಿಯ ಸಮೀಕ್ಷೆ ನಡೆಸಲು ತೆರಳಿದ್ದ ಸ್ವಯಂ ಸೇವಾ ತಂಡದ ಸದಸ್ಯರು ಭಾರತ್ ಫೌಂಡ್ರಿ ಬಳಿಯ ಕಾಲುವೆಯಲ್ಲಿ ಗಂಡು ಮಗುವಿನ ಶವ ಪತ್ತೆ ಹಚ್ಚಿ, ದೊಡ್ಡಪೇಟೆ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮನೆಗಳಿಗೆ ನೀರು ನುಗ್ಗಿದಾಗ ಮಗು ಕೊಚ್ಚಿಕೊಂಡು ಬಂದಿದೆಯೇ? ಬೇರೆ ಕಾರಣಗಳಿಗಾಗಿ ನೀರಿಗೆ ಎಸೆಯಲಾಗಿದೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.