ADVERTISEMENT

ಸಾಗರ| ಕಾಫಿ ಉತ್ತಮ ಇಳುವರಿಗೆ ಮಣ್ಣಿನ ಫಲವತ್ತತೆ ಅಗತ್ಯ: ನವೀನ್ ಕುಮಾರ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 4:32 IST
Last Updated 9 ಜನವರಿ 2026, 4:32 IST
ಸಾಗರಕ್ಕೆ ಸಮೀಪದ ಮುತ್ತುಗ ಗ್ರಾಮದಲ್ಲಿ ಬುಧವಾರ ಕಾಫಿ ಬೆಳೆ ವಿಚಾರ ಸಂಕಿರಣ ನಡೆಯಿತು.
ಸಾಗರಕ್ಕೆ ಸಮೀಪದ ಮುತ್ತುಗ ಗ್ರಾಮದಲ್ಲಿ ಬುಧವಾರ ಕಾಫಿ ಬೆಳೆ ವಿಚಾರ ಸಂಕಿರಣ ನಡೆಯಿತು.   

ಸಾಗರ: ಕಾಫಿ ಬೆಳೆಯ ಉತ್ತಮ ಇಳುವರಿ ಪಡೆಯಲು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವತ್ತ ಕೃಷಿಕರು ಹೆಚ್ಚಿನ ಗಮನ ನೀಡಬೇಕು ಎಂದು ಹಾಸನ ಕಾಫಿ ಮಂಡಳಿಯ ಜಂಟಿ ನಿರ್ದೇಶಕ ನವೀನ್ ಕುಮಾರ್ ಹೇಳಿದರು.

ಸಮೀಪದ ಮುತ್ತುಗ ಗ್ರಾಮದಲ್ಲಿ ಸಾಗರ ಕಾಫಿ ಸೊಸೈಟಿ, ಕೊಪ್ಪ ಕಾಫಿ ಮಂಡಳಿ ಬುಧವಾರ ಏರ್ಪಡಿಸಿದ್ದ ಕಾಫಿ ಬೆಳೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಚಿಕ್ಕಮಗಳೂರು, ಹಾಸನ ಪ್ರದೇಶದ ರೀತಿಯಲ್ಲೆ ಶಿವಮೊಗ್ಗ ಸುತ್ತಮುತ್ತಲೂ ಕಾಫಿ ಬೆಳೆ ಬೆಳೆಯಲು ಈ ಭಾಗದ ಕೃಷಿಕರು ಉತ್ಸಾಹ ತೋರಬೇಕು ಎಂದರು.

ADVERTISEMENT

ಸಾಗರ ಕಾಫಿ ಸೊಸೈಟಿ ಅಧ್ಯಕ್ಷ ಪಿ.ಎನ್.ಶಶಿಧರ ಹರತಾಳು ಅಧ್ಯಕ್ಷತೆ ವಹಿಸಿದ್ದರು. ಚಿಕ್ಕಮಗಳೂರು ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟ ರೆಡ್ಡಿ, ಹಿರಿಯ ಸಂಪರ್ಕಾಧಿಕಾರಿ ಪ್ರಭು ಗೌಡ, ಪ್ರಮುಖರಾದ ಚಂದ್ರಶೇಖರ್, ವಿಜಯಲಕ್ಷ್ಮಿ, ರಾಜಶೇಖರ್, ರಾಘವೇಂದ್ರ ಕಾನುಗೋಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.