ADVERTISEMENT

ಶಿವಮೊಗ್ಗ ಜಿಲ್ಲೆಯಲ್ಲಿ ದೃಢಪಟ್ಟಿಲ್ಲ ಕೊರೊನಾ ವೈರಸ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 14:11 IST
Last Updated 20 ಮಾರ್ಚ್ 2020, 14:11 IST

ಶಿವಮೊಗ್ಗ: ಕೊರೊನಾ ವೈರಸ್‌ ತಗುಲಿರುವ ಪ್ರದೇಶಗಳಿಂದ ಬಂದ ಜಿಲ್ಲೆಯ 143 ಜನರ ಮೇಲೆ ನಿಗಾ ಇಡಲಾಗಿದ್ದು, 18 ಜನರ ಕಫ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದುವರೆಗೂ ಒಂದೂ ಪಾಸಿಟಿವ್ ಬಂದಿಲ್ಲ.

98 ಜನರನ್ನು 14ದಿನಗಳು ನಿಗಾದಲ್ಲಿ ಇರಿಸಲಾಗಿತ್ತು. 34 ಜನರು ನಿಗಾ ಅವಧಿ ಪೂರೈಸಿದ್ದಾರೆ. 11 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಲ್ಲರೂ ಆರೋಗ್ಯವಾಗಿದ್ದಾರೆ. ಒಂದು ಸ್ಯಾಂಪಲ್‌ ಫಲಿತಾಂಶ ಬರಬೇಕಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT