ADVERTISEMENT

ಕೋವಿಡ್‌ ಲಸಿಕೆ ಅಭಿಯಾನ: ಶಿವಮೊಗ್ಗ ಜಿಲ್ಲೆಗೆ ದ್ವಿತೀಯ ಸ್ಥಾನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 4:03 IST
Last Updated 18 ಸೆಪ್ಟೆಂಬರ್ 2021, 4:03 IST
ಡಾ.ರಾಜೇಶ್‌ ಸುರಗಿಹಳ್ಳಿ
ಡಾ.ರಾಜೇಶ್‌ ಸುರಗಿಹಳ್ಳಿ   

ಶಿವಮೊಗ್ಗ: ಕೋವಿಡ್‌ ಲಸಿಕಾ ಅಭಿಯಾನದಲ್ಲಿ ಶಿವಮೊಗ್ಗ ಜಿಲ್ಲೆ ಗುರಿ ಮೀರಿದ ಸಾಧನೆ ಮಾಡಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದೆ.

ಲಸಿಕಾ ಅಭಿಯಾನದ ದಿನವಾದ ಶುಕ್ರವಾರ ಜಿಲ್ಲೆಯಲ್ಲಿ 7 ಖಾಸಗಿ ಆಸ್ಪತ್ರೆ ಸೇರಿ ಒಟ್ಟು‌ 350 ಆರೋಗ್ಯ ಕೇಂದ್ರದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಅಥವಾ ಎರಡನೇ ಡೋಸ್ ಲಸಿಕೆ ನೀಡಲಾಯಿತು.

ಆರಂಭದಲ್ಲಿ 80 ಸಾವಿರ ಈ ಗುರಿ ಹೊಂದಿದ್ದು, ಮಧ್ಯಾಹ್ನದ ನಂತರ 20 ಸಾವಿರ ಹೆಚ್ಚುವರಿ ಲಸಿಕೆ ನೀಡಿ ಒಂದು ಲಕ್ಷದ ಗುರಿ ಹೊಂದಲಾಗಿತ್ತು. ಇದನ್ನು ಮೀರಿ 1,02,567 ಮಂದಿಗೆ ಲಸಿಕೆ ನೀಡಲಾಗಿದೆ.

ADVERTISEMENT

ರಾಜ್ಯದಲ್ಲಿ 25,41,608 ಜನರಿಗೆ ಲಸಿಕೆ ನೀಡಲಾಗಿದೆ. ಬೆಂಗಳೂರು ಜಿಲ್ಲೆ ಶೇ 132ರಷ್ಟು ಗುರಿ ಸಾಧಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದು, ಶೇ 128 ಗುರಿ ಸಾಧಿಸಿರುವ ಶಿವಮೊಗ್ಗ ಜಿಲ್ಲೆ 2ನೇ ಸ್ಥಾನದಲ್ಲಿದೆ. ರಾಮನಗರ, ಧಾರವಾಡ, ಹಾಸನ ನಂತರ ಸ್ಥಾನದಲ್ಲಿವೆ.

‘ರಾಜ್ಯದಿಂದ ಶಿವಮೊಗ್ಗ ಜಿಲ್ಲೆಗೆ 80 ಸಾವಿರ ಲಸಿಕೆ ಗುರಿ ನೀಡಲಾಗಿತ್ತು. ಅದನ್ನು ನಾವು ಒಂದು ಲಕ್ಷಕ್ಕೆ ಹೆಚ್ಚಿಸಿಕೊಂಡಿದ್ದೆವು. ಅದನ್ನು ಮೀರಿ ಜಿಲ್ಲೆಯಲ್ಲಿ 1.4 ಲಕ್ಷ ಮಂದಿಗೆ ಶುಕ್ರವಾರ ಲಸಿಕೆ ಹಾಕಲಾಗಿದೆ’ ಎಂದು ಡಿಎಚ್‌ಒ ಡಾ.ರಾಜೇಶ್‌ ಸುರಗೀಹಳ್ಳಿ ತಿಳಿಸಿದರು.

***

ರಾಜ್ಯದಿಂದ ಶಿವಮೊಗ್ಗ ಜಿಲ್ಲೆಗೆ 80 ಸಾವಿರ ಲಸಿಕೆ ಗುರಿ ನೀಡಲಾಗಿತ್ತು. ಅದನ್ನು ನಾವು ಒಂದು ಲಕ್ಷಕ್ಕೆ ಹೆಚ್ಚಿಸಿಕೊಂಡಿದ್ದೆವು. ಅದನ್ನು ಮೀರಿ ಜಿಲ್ಲೆಯಲ್ಲಿ 1.4 ಲಕ್ಷ ಮಂದಿಗೆ ಶುಕ್ರವಾರ ಲಸಿಕೆ ಹಾಕಲಾಗಿದೆ.

- ಡಾ.ರಾಜೇಶ್‌ ಸುರಗೀಹಳ್ಳಿ, ಡಿಎಚ್‌ಒ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.