ADVERTISEMENT

‘ಸೃಜನಶೀಲತೆಗೆ ಸಮಕಾಲೀನ ಕಲಿಕೆ– ಕೌಶಲ ಅಗತ್ಯ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:36 IST
Last Updated 15 ನವೆಂಬರ್ 2025, 6:36 IST

ಶಿವಮೊಗ್ಗ: ‘ಸಮಕಾಲೀನ ಜ್ಞಾನ, ಕೌಶಲಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಸೃಜನಶೀಲತೆ ಹೆಚ್ಚುತ್ತದೆ’ ಎಂದು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಟಿ.ಅವಿನಾಶ್ ತಿಳಿಸಿದರು.

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರವಾಸೋದ್ಯಮ ಅಧ್ಯಯನ ವಿಷಯದ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬದಲಾಗುತ್ತಿರುವ ಜಗತ್ತಿನಲ್ಲಿ ಜ್ಞಾನ, ತಂತ್ರಜ್ಞಾನ, ಉದ್ಯೋಗ ಕ್ಷೇತ್ರ ಹಾಗೂ ಸಾಮಾಜಿಕ ವಾತಾವರಣದಲ್ಲಿ ನಿರಂತರ ಪರಿವರ್ತನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಂಪರೆಯ ಕಲಿಕೆಯ ವಿಧಾನಗಳಲ್ಲಿ ಮಾತ್ರ ಸೀಮಿತವಾಗಬಾರದು’ ಎಂದು

ADVERTISEMENT

‘ಪುಸ್ತಕಾಧಾರಿತ ಜ್ಞಾನ ಸಾಕಾಗುವುದಿಲ್ಲ. ಡಿಜಿಟಲ್ ಸಾಹಿತ್ಯಕತೆ. ತಂತ್ರಜ್ಞಾನ ಬಳಕೆ ಮತ್ತು ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸುವ ಕೌಶಲಗಳ ಅಗತ್ಯ ಹೆಚ್ಚಾಗಿದೆ’ ಎಂದರು.

ಕಾಲೇಜಿನ ಪ್ರಾಧ್ಯಾಪಕ ಕುಂದನ್ ಬಸವರಾಜ್, ಸರಳಾ ಕೆ.ಎಸ್, ಗಿರಿಧರ್ ಕೆ.ವಿ, ವೀರಶೆಟ್ಟಿ ಜಿ. ರಾಠೋಡ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.