ADVERTISEMENT

ತೀರ್ಥಹಳ್ಳಿ: ದಸಂಸ ಜನ ಜಾಗೃತಿ ಸಮಾವೇಶ ಜ.12ಕ್ಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 5:22 IST
Last Updated 2 ಜನವರಿ 2026, 5:22 IST
ಕೆ.ವಿ.ನಾಗರಾಜ್‌
ಕೆ.ವಿ.ನಾಗರಾಜ್‌   

ತೀರ್ಥಹಳ್ಳಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯ ಮಟ್ಟದ ಜನ ಜಾಗೃತಿ ಸಮಾವೇಶವನ್ನು ಇಲ್ಲಿನ ಬಂಟರ ಭವನದಲ್ಲಿ ಜ.12ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಕೆ.ವಿ.ನಾಗರಾಜ್‌ ಹೇಳಿದರು.

ದಲಿತ ಚೇತನ ಲಕ್ಷ್ಮೀನಾರಾಯಣ ನಾಗವಾರ ಅವರ ನೆನಪಿನಲ್ಲಿ ಪ್ರಥಮ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಘಟನೆ, ಶಿಕ್ಷಣ, ಹೋರಾಟಗಳ ಮೂಲಕ ಪರಿಶಿಷ್ಟರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸುವ ಜೊತೆಗೆ ಗಟ್ಟಿಯಾದ ಧ್ವನಿಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಮಾವೇಶ ರೂಪಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೂರ್ವಕ್ಷೇತ್ರದ ಶಾಸಕ ಅಬ್ಬಯ್ಯ ಪ್ರಸಾದ್‌ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆರಡಿ ಮಲ್ಲಯ್ಯ, ಸಹ ಪ್ರಾಧ್ಯಾಪಕ ಪ್ರದೀಪ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಾಜ್ಯ ಸಂಚಾಲಕರಾದ ಕೆಂಪಣ್ಣ ಸಾಗ್ಯ, ವೆಂಕಟೇಶಮೂರ್ತಿ ಸೇರಿದಂತೆ ಸಾಹಿತಿಗಳು, ಕವಿಗಳು, ಚಿಂತಕರು ಭಾಗವಹಿಸಲಿದ್ದಾರೆ.

ADVERTISEMENT

ಸುರೇಶ್‌ ಸ್ವಾಮಿ, ರಾಧಕೃಷ್ಣ, ಯಲ್ಲಪ್ಪ ಅಂಬುತೀರ್ಥ, ಬಸವರಾಜ, ಹಾದಿಗಲ್ಲು ಮಂಜುನಾಥ, ಮುದ್ದಣ್ಣ ಕೊಗ್ರಿ, ಹಾಲಮ್ಮ, ಶಾಂತಮ್ಮ, ಡಾಕಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.