ADVERTISEMENT

ಭದ್ರಾವತಿ: ವೈದ್ಯರ ಮನೆಯ ಆವರಣಕ್ಕೆ ನುಗ್ಗಿದ ಗುಂಪು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 6:36 IST
Last Updated 21 ಸೆಪ್ಟೆಂಬರ್ 2025, 6:36 IST
ಸಿದ್ದಾರೂಢನಗರದಲ್ಲಿ ರಾತ್ರಿ ವೇಳೆ 7-8 ಜನರ ಗುಂಪು ವೈದ್ಯರೊಬ್ಬರ ಮನೆಯ ಕಾಂಪೌಂಡ್ ಪ್ರವೇಶಿಸಿರುವ ದೃಶ್ಯ
ಸಿದ್ದಾರೂಢನಗರದಲ್ಲಿ ರಾತ್ರಿ ವೇಳೆ 7-8 ಜನರ ಗುಂಪು ವೈದ್ಯರೊಬ್ಬರ ಮನೆಯ ಕಾಂಪೌಂಡ್ ಪ್ರವೇಶಿಸಿರುವ ದೃಶ್ಯ   

ಭದ್ರಾವತಿ: ನಗರಸಭೆ ವ್ಯಾಪ್ತಿಯ ಸಿದ್ದಾರೂಢ ನಗರದಲ್ಲಿ ರಾತ್ರಿ ವೇಳೆ 8 ಜನರ ಗುಂಪೊಂದು ವೈದ್ಯರೊಬ್ಬರ ಮನೆಯ ಕಾಂಪೌಂಡ್ ಪ್ರವೇಶಿಸಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಡಾ. ಅಶ್ವತ್ಥ್‌ನಾರಾಯಣರವರ ಕಾಂಪೌಂಡ್ ಒಳಗೆ ರಾತ್ರಿ ವೇಳೆ ಮಂಕಿ–ಕ್ಯಾಪ್ ಧರಿಸಿರುವ ಗುಂಪು ನುಗ್ಗಿದ್ದು, ಕೆಲವು ಸಮಯದ ನಂತರ ಹಿಂದಿರುಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಗುಂಪಿನಿಂದ ನಿವಾಸಿಗಳಿಗೆ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ ಯಾರು ದೂರು ನೀಡಿಲ್ಲ. ಈ ಘಟನೆ 2 ದಿನಗಳ ಹಿಂದೆ ನಡೆದಿದ್ದು, ಇದು ಚಡ್ಡಿ ಗ್ಯಾಂಗ್ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ, ಈ ಗುಂಪಿಗೂ ಚಡ್ಡಿ ಗ್ಯಾಂಗ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.