ಬಂಧನ
(ಸಾಂದರ್ಭಿಕ ಚಿತ್ರ)
ಕುಂಸಿ: ಗಾಂಜಾ ಮಾರಾಟ ಆರೋಪ ಸಂಬಂಧ ಇಲ್ಲಿನ ಪೊಲೀಸರು ಬುಧವಾರ ಇಬ್ಬರನ್ನು ಬಂಧಿಸಿದ್ದಾರೆ.
ಹಾರನಹಳ್ಳಿಯ ವಿಷ್ಣು ಹಾಗೂ ನಾರಾಯಣಪುರದ ಸುನಿಲ್ ನಾಯ್ಕ ಬಂಧಿತ ಆರೋಪಿಗಳು.
ಸಮೀಪದ ಆಯನೂರಿನ ಪದವಿ ಪೂರ್ವ ಕಾಲೇಜಿನ ಹಿಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಇವರು ಗಾಂಜಾ ಮಾರಾಟ ಮಾಡುತ್ತಿದ್ದರು. ಅವರಿಂದ ₹ 12,500 ಮೌಲ್ಯದ 310 ಗ್ರಾಂ ಗಾಂಜಾ ಸೊಪ್ಪು ಮತ್ತು ಗಾಂಜಾ ಸೇವನೆ ಮಾಡಲು ಬಳಸುತ್ತಿದ್ದ ಕೊಳವೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಂಸಿ ಠಾಣೆಯ ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ನೇತೃತ್ವದಲ್ಲಿ ಪಿಎಸ್ಐ ಶಾಂತರಾಜ್, ತೊಳಚನಾಯ್ಕ, ಸಿಬ್ಬಂದಿ ಹಾಲಪ್ಪ, ಶಿವಪ್ಪ, ಶಶಿಧರ್, ವಿನಾಯಕ, ಶಶಿ, ಆದರ್ಶ ಕಾರ್ಯಾಚರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.