
ಶಿಕಾರಿಪುರ: ‘ಜೀವನ ನಡೆಸಲು, ಜ್ಞಾನಾರ್ಜನೆಗೆ ಶಿಕ್ಷಣ ಅಗತ್ಯವಾದರೆ, ಸಂಸ್ಕಾರವು ಮನುಷ್ಯನಿಗೆ ಗೌರವ, ಪ್ರೀತಿ, ಉತ್ತಮ ನಡವಳಿಕೆ ಕಲಿಸುತ್ತದೆ. ಇವೆರಡೂ ಇದ್ದಾಗ ಸುಂದರ ಜೀವನ ಸಾಧ್ಯ’ ಎಂದು ಬಾಪೂಜಿ ಪ್ರೌಢಶಾಲೆ ಮುಖ್ಯಶಿಕ್ಷಕ ರಾಘವೇಂದ್ರ ಕುಲಕರ್ಣಿ ಹೇಳಿದರು.
ಪಟ್ಟಣದ ಮೈತ್ರಿ ಪ್ರಾಥಮಿಕ, ಕುಮದ್ವತಿ ಪ್ರೌಢಶಾಲೆಯಲ್ಲಿ ಶುಕ್ರವಾರ ವಾರ್ಷಿಕ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸಂಸ್ಕಾರವಿಲ್ಲದ ಶಿಕ್ಷಣ ನಿರರ್ಥಕ ಮತ್ತು ಸಂಸ್ಕಾರವಿಲ್ಲದ ಶಿಕ್ಷಣ ಮನುಷ್ಯನನ್ನು ಯಾಂತ್ರಿಕವಾಗಿಸುತ್ತದೆ. ಆಧುನಿಕ ಜಗತ್ತಿನಲ್ಲಿ ಸಂಬಂಧ ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ಶಿಕ್ಷಣದ ಜತೆ ಸಂಸ್ಕಾರ ನೀಡುವ ಶಾಲೆಗಳ ಅಗತ್ಯ ಹೆಚ್ಚಾಗಿದೆ’ ಎಂದರು.
‘ವಿದ್ಯಾರ್ಥಿಯ ಶ್ರಮ, ಪ್ರತಿಭೆ, ಶ್ರೇಷ್ಠತೆ ಗುರುತಿಸಿ ಪುರಸ್ಕರಿಸುವ ಕೆಲಸ ಮಾಡಿದಾಗ ಸಾಧನೆಗೆ ಉತ್ತೇಜನ ಸಿಗುತ್ತದೆ. ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಸಾಧನೆಗಳಿಗಾಗಿ ಬಹುಮಾನ ವಿತರಿಸಲಾಗುತ್ತಿದ್ದು ಬಹುಮಾನ ಪಡೆದವರು ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ’ ಎಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಸಿ.ರವೀಂದ್ರ ಹೇಳಿದರು.
ಮುಖ್ಯಶಿಕ್ಷಕ ಪಿ.ವಿಶ್ವನಾಥ್, ಪ್ರಭಾರಿ ಮುಖ್ಯಶಿಕ್ಷಕ ಪ್ರಶಾಂತ ಕುಬಸದ, ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಅನಘ ಪಂಡಿತ ತಂಡ ಪ್ರಾರ್ಥಿಸಿ, ಸ್ಪೂರ್ತಿ ಸ್ವಾಗತಿಸಿ, ಲಕ್ಷ್ಮಿ, ವೈಷ್ಣವಿ ನಿರೂಪಿಸಿ, ಸೈಯದಾ ಅಫೀಪಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.