ರಿಪ್ಪನ್‌ಪೇಟೆ: ಸಾಲಬಾಧೆಯಿಂದ ಇಲ್ಲಿನ ಹರತಾಳು ಗ್ರಾಮದ ದೇವಿಕೊಪ್ಪದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಮಂಜಪ್ಪ(68) ಮೃತ ದುರ್ದೈವಿ.
ಇವರು ಕೃಷಿ ಕೆಲಸಕ್ಕಾಗಿ ಹರತಾಳು ಕೃಷಿ ಪತ್ತಿನ ಸಹಕಾರ ಸಂಘದಿಂದ ₹.1.90 ಲಕ್ಷ ಹಾಗೂ ಶಿವಮೊಗ್ಗದ ಅದಾನಿ ಫೈನಾನ್ಸ್‌ನಲ್ಲಿ ₹7 ಲಕ್ಷ ಸಾಲ ಮಾಡಿದ್ದರು. ಬೆಳೆ ಕೈ ಕೊಟ್ಟ ಕಾರಣ, ಸಾಲ ಮರುಪಾವತಿಸಲು ಆಗದೇ ಬೇಸತ್ತಿದ್ದರು ಎನ್ನಲಾಗಿದೆ.
ಶನಿವಾರ ತಮ್ಮ ಹಳೆ ಮನೆಯಲ್ಲಿ ಕಳೆನಾಶಕ ಸೇವಿಸಿದ್ದಾರೆ. ಕೂಡಲೇ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಮೃತಪಟ್ಟರು. ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.