ADVERTISEMENT

ಹಲಸು ತಿಂದು 5 ಜಾನುವಾರು ಸಾವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 3:21 IST
Last Updated 30 ಜುಲೈ 2022, 3:21 IST

ಹೊಸನಗರ: ತಾಲ್ಲೂಕಿನ ಇಟ್ಟಕ್ಕಿ ಗ್ರಾಮದಲ್ಲಿಗುರುವಾರ ಹಲಸಿನ ಹಣ್ಣು ತಿಂದುಒಂದು ಹಸು ಹಾಗೂ ನಾಲ್ಕು ಎತ್ತುಗಳು ಮೃತಪಟ್ಟಿವೆ.

ಗ್ರಾಮದ ರಮೇಶ ಅವರಿಗೆ ಸೇರಿದ ಜಾನುವಾರು ಗುಡ್ಡಕ್ಕೆ ಮೇಯಲು ಹೋದಾಗ ಹಲಸಿನ ಹಣ್ಣು ತಿಂದಿದ್ದವು.

ಹೆಚ್ಚಿನ ಪ್ರಮಾಣದಲ್ಲಿ ಹಲಸಿನ ಹಣ್ಣು ತಿಂದ ಕಾರಣ ಜಾನುವಾರು ಮೃತಪಟ್ಟಿರ
ಬಹುದು ಎಂದು ಪರೀಕ್ಷೆ ನಡೆಸಿದ ಪಶು ವೈದ್ಯಾಧಿಕಾರಿ ಡಾ. ನಾಗರಾಜ್, ಡಾ.
ಗಿರೀಶ್, ಡಾ. ಕೃಷ್ಣೆಗೌಡ ಶಂಕಿಸಿದ್ದಾರೆ.

ADVERTISEMENT

ಜಾನುವಾರು ದೇಹದ ಭಾಗಗಳ ಮಾದರಿ
ಸಂಗ್ರಹಿಸಲಾಗಿದೆ. ಪರೀಕ್ಷೆ ನಡೆಸಿ ಸಾವಿಗೆ ನಿಖರ ಕಾರಣ ತಿಳಿಯಲಾಗುವುದು
ಎಂದು ಡಾ. ನಾಗರಾಜ್ ತಿಳಿಸಿದ್ದಾರೆ.

ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ಡಾ. ಎಂ.ಬಿ. ಶ್ರೀಧರ್ ಮತ್ತು ತಂಡ ಭೇಟಿ ನೀಡಿ ಹೆಚ್ಚಿನ ಪರೀಕ್ಷೆ ನಡೆಸಿತು.

‘ಹಲಸಿನ ಹಣ್ಣಿಗೆ ಯಾರೋ ವಿಷಪ್ರಾಷನ ಮಾಡಿರುವ ಶಂಕೆ ಇದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.