ADVERTISEMENT

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಜನ್ಮದಿನ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 14:18 IST
Last Updated 13 ಜನವರಿ 2020, 14:18 IST
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ   

ಶಿವಮೊಗ್ಗ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಮಾಯಾವತಿಅವರ 64ನೇ ಜನ್ಮ ದಿನವನ್ನು ಜನವರಿ 15ರಂದುಸರಳವಾಗಿಆಚರಿಸಲಾಗುವುದು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎ.ಡಿ.ಶಿವಪ್ಪ ಹೇಳಿದರು.

ಮಾಯಾವತಿಗೆಪ್ರಧಾನಿಯಾಗುವ ಅರ್ಹತೆಇದೆ. ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಸಂವಿಧಾನದ ಆಶಯದಂತೆ ಎಲ್ಲ ಜಾತಿ, ಧರ್ಮಗಳನ್ನು ಸಮಾನವಾಗಿ ಕಂಡಿದ್ದಾರೆ. ಸರ್ವರಿಗೂ ಸಮಪಾಲು ಎಂಬ ತತ್ವದಆಧಾರದಲ್ಲಿ ಕೆಲಸ ಮಾಡಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾಂಗ್ರೆಸ್‌,ಬಿಜೆಪಿ ಯಾವತ್ತು ಜನಪರವಾಗಿಲ್ಲ. ಕಾಂಗ್ರೆಸ್ ಕೇವಲ ಭ್ರಮೆಗಳನ್ನು ಹುಟ್ಟಿಸಿತು. ಪರಿಶಿಷ್ಟರಿಗೆ ಯಾವ ನ್ಯಾಯವೂ ಸಿಗಲಿಲ್ಲ. ಬಿಜೆಪಿ ನ್ಯಾಯವನ್ನೇ ಕಸಿದುಕೊಂಡಿತು. ಮನು ಧರ್ಮ ಸಿದ್ಧಾಂತಕ್ಕೆಮರುಳಾಗಿ ಮಾನವ ಧರ್ಮವನ್ನೇ ಮರೆತುಬಿಟ್ಟಿತು. ದೇಶದ ಆರ್ಥಿಕ ಪರಿಸ್ಥಿತಿ ಬುಡಮೇಲು ಮಾಡಿದೆಎಂದು ಟೀಕಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿ ಮುಖಂಡರಾದ ಜಿ.ಸಂಗಪ್ಪ, ಎಚ್.ಎನ್.ಶ್ರೀನಿವಾಸ್, ಲಕ್ಷ್ಮೀಪತಿ, ಚಂದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.