ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆ ನಾಮಪತ್ರದ ಅರ್ಜಿಯಲ್ಲಿ ‘ಯಾವ ಪಕ್ಷದ ಬೆಂಬಲದ ಮೇಲೆ ಸ್ಪರ್ಧೆ’ ಎನ್ನುವ ಕಾಲಂ ಅಳವಡಿಸಿರುವ ಚುನಾವಣಾ ಆಯೋಗ ಕ್ರಮಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಗಳ ಚುನಾವಣೆ ಪಕ್ಷಾತೀತವಾಗಿ ನಡೆಯಬೇಕು. ಈ ರೀತಿಯ ಕಾಲಂ ಭರ್ತಿಗೆ ಸೂಚಿಸಿರುವುದು ಸರಿಯಲ್ಲ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿ ಸಂಸತ್ ಹಾಗೂ ವಿಧಾನ ಸಭೆ ಚುನಾವಣೆ ಪಕ್ಷದ ನೆಲೆಗಟ್ಟಿನಲ್ಲಿ ನಡೆಯಲು ಬಯಸುತ್ತದೆ. ಆದರೆ, ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷದ ಬೆಂಬಲ, ಚಿಹ್ನೆಯ ಆಧಾರದ ಮೇಲೆ ನಡೆಯುವುದನ್ನು ಬಯಸುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.