ADVERTISEMENT

ಶಿಕಾರಿಪುರ: ಬಂದಳಿಕೆ ಶ್ರೀ ಬನಶಂಕರಿ ದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 3:06 IST
Last Updated 6 ಜನವರಿ 2026, 3:06 IST
ಶಿಕಾರಿಪುರ ತಾಲ್ಲೂಕು ಕೊನೆಗ್ರಾಮ ಬಂದಳಿಕೆ ಗ್ರಾಮದಲ್ಲಿ ಭಾನುವಾರ ಶ್ರೀ ಬನಶಂಕರಿ ದೇವಿ ಜಾತ್ರೋತ್ಸವ ನಡೆಯಿತು.
ಶಿಕಾರಿಪುರ ತಾಲ್ಲೂಕು ಕೊನೆಗ್ರಾಮ ಬಂದಳಿಕೆ ಗ್ರಾಮದಲ್ಲಿ ಭಾನುವಾರ ಶ್ರೀ ಬನಶಂಕರಿ ದೇವಿ ಜಾತ್ರೋತ್ಸವ ನಡೆಯಿತು.   

ಶಿಕಾರಿಪುರ: ತಾಲ್ಲೂಕಿನ ಐತಿಹಾಸಿಕ ಬಂದಳಿಕೆ ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಜಾತ್ರಾ ಮಹೋತ್ಸವ ಅಂಗವಾಗಿ ದೇವಿ ವಿಶೇಷ ಪೂಜೆ, ಅಭಿಷೇಕ ನಡೆಸಲಾಯಿತು. ತಹಸೀಲ್ದಾರ್ ಮಂಜುಳಾ ಭಜಂತ್ರಿ, ಹಿರೇಮಾಗಡಿ ಮುರುಘರಾಜೇಂದ್ರ ಸ್ವಾಮೀಜಿ, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಸ್ವಾಮೀಜಿ, ಶಿರಾಳಕೊಪ್ಪ ವಿರಕ್ತಮಠದ ಚನ್ನಬಸವ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ತೇರನ್ನು ಎಳೆದು, ಹರಕೆ ಸಲ್ಲಿಸಿ ಪುನೀತರಾದರು.

ಬನದ ಹುಣ್ಣಿಮೆ ಮಾರನೆ ದಿನ ನಡೆಯುವ ಈ ಜಾತ್ರೆ ಶಿರಾಳಕೊಪ್ಪ ಭಾಗದ ಮೊದಲ ಜಾತ್ರೆಯಾಗಿದ್ದು ಐತಿಹಾಸಿಕ ಪ್ರತೀತಿ ಹೊಂದಿರುವ ಈ ಜಾತ್ರೆಗೆ ದೂರದ ಊರುಗಳಿಂದ ಭಕ್ತರು ಟ್ರಾಕ್ಟರ್, ಗಾಡಿ ಕಟ್ಟಿಕೊಂಡು ಆಗಮಿಸಿದ್ದರು. ದೇವಸ್ಥಾನದ ಸುತ್ತಲ ಪ್ರದೇಶದಲ್ಲಿ ಬಿಡಾರ ಹೂಡಿ ತಮ್ಮ ಕುಟುಂಬ ಮಿತ್ರರೊಂದಿಗೆ ಊಟ ಮಾಡುವ ದೃಶ್ಯ ಸಾಮಾನ್ಯವಾಗಿತ್ತು. ಶಿರಾಳಕೊಪ್ಪ, ತೊಗರ್ಸಿ, ಸುಣ್ಣದಕೊಪ್ಪ, ಆನವಟ್ಟಿ, ಹಿರೇಕೇರೂರು, ಶಿವಮೊಗ್ಗ, ಹಾವೇರಿ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಶಾಸಕ ಬಿ.ವೈ.ವಿಜಯೇಂದ್ರ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಬನಶಂಕರಿ ಜಾತ್ರೆ ಮಹೋತ್ಸವ ಅಧ್ಯಕ್ಷ ಮಂಜಪ್ಪ, ವೀರಬಸಪ್ಪ ಗುಗ್ಗರಿ, ಕೆ.ನಾಗರಾಜಪ್ಪ, ಕೆ.ಸುರೇಶಪ್ಪ, ಸಿ.ಜೆ.ಸುರೇಶಪ್ಪ, ಲಲಿತಮ್ಮ, ವೀರಭದ್ರಪ್ಪ, ರವಿ ಉಪ್ಪಾರ್ ಭಕ್ತರು, ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.