ADVERTISEMENT

ಹೊಳೆಹೊನ್ನೂರು: ಹುಂಡಿ ಹಣಕ್ಕಾಗಿ ಚರ್ಚ್‌ನಲ್ಲಿ ವಾಗ್ವಾದ, ಹಲ್ಲೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 15:15 IST
Last Updated 9 ಫೆಬ್ರುವರಿ 2025, 15:15 IST
<div class="paragraphs"><p>ಹಲ್ಲೆ</p></div>

ಹಲ್ಲೆ

   

(ಪ್ರಾತಿನಿಧಿಕ ಚಿತ್ರ)

ಹೊಳೆಹೊನ್ನೂರು (ಶಿವಮೊಗ್ಗ ಜಿಲ್ಲೆ): ಸಮೀಪದ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿರುವ ಚರ್ಚ್‌‌ನಲ್ಲಿ ಹುಂಡಿ ಹಣದ ವಿಚಾರವಾಗಿ ಎರಡು ಟ್ರಸ್ಟ್‌ಗಳ ಸದಸ್ಯರ ನಡುವೆ ವಾಗ್ವಾದ ನಡೆದಿದ್ದು, ಹಲ್ಲೆಗೆ ಕಾರಣವಾಗಿದೆ.

ADVERTISEMENT

ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿರುವ ಚರ್ಚ್‌ ಹಳೆಯ ಮತ್ತು ಹೊಸ ಟ್ರಸ್ಟ್‌ ಒಳಗೊಂಡಿದೆ. ‘ಭಕ್ತರು ಚರ್ಚ್‌ನ ಹುಂಡಿಗೆ ಹಾಕುವ ಕಾಣಿಕೆ ಹಣ ನಮಗೇ ಸೇರಬೇಕು’ ಎಂದು ಎರಡೂ ಬಣದವರು ವಾಗ್ವಾದ ನಡೆಸಿದ್ದಾರೆ. ಹಣ ದುರ್ಬಳಕೆಯಾಗಿದೆ ಎಂದು ಪರಸ್ಪರ ಆರೋಪಿಸಿ ಚರ್ಚ್‌ನಲ್ಲಿ ದಾಂದಲೆ ನಡೆಸಿದ್ದಾರೆ. ಈ ಸಂದರ್ಭ ಹಲ್ಲೆ ನಡೆಸಲಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡೂ ಬಣದವರು ಪಟ್ಟಣದ ಪೊಲೀಸ್ ಠಾಣೆಗೆ ದೂರು– ಪ್ರತಿದೂರು ನೀಡಿದ್ದಾರೆ. ಚರ್ಚ್ ಹುಂಡಿಯ ಹಣ ಪ್ರಾರ್ಥನಾ ಸಭೆಗೆ ಹಾಗೂ ಚರ್ಚ್ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಕೆಯಾಗಬೇಕೆಂಬುದು ಭಕ್ತರ ಆಗ್ರಹವಾಗಿದೆ. ಶಿವಮೊಗ್ಗದಿಂದ ದುಷ್ಕರ್ಮಿಗಳನ್ನು ಕರೆಸಿ ಹಲ್ಲೆ ನಡೆಸಲಾಗಿದೆ ಎಂದು ಕ್ಯಾಂಪ್‌ನ ನಿವಾಸಿಗಳು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.