ADVERTISEMENT

ಗೃಹಸಚಿವರ ರಾಜೀನಾಮೆಗೆ ಒತ್ತಾಯ

ನವದೆಹಲಿಯಲ್ಲಿ ಉಗ್ರರಿಂದ ಕಾರ್ ದಾಳಿಗೆ ಕಾಂಗ್ರೆಸ್ ಖಂಡನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 4:19 IST
Last Updated 13 ನವೆಂಬರ್ 2025, 4:19 IST
–
   

ಶಿವಮೊಗ್ಗ : ಕಾಶ್ಮೀರದ ಕಹಿ ಘಟನೆ ಮಾಸುವ ಮುನ್ನವೇ ಕೆಂಪು ಕೋಟೆಯ ಕೂಗಳತೆಯಲ್ಲಿ ಉಗ್ರರ ಬಾಂಬ್ ಸ್ಪೋಟಿಸಿ ಅಮಾಯಕ ನಾಗರೀಕರ ಬಲಿಗೆ ಕೇಂದ್ರ ಗೃಹ ಸಚಿವರ ಅಮಿತಾ ಶಾ ವೈಪಲ್ಯ ಕಾರಣ ಎಂದು ಯುವ ಕಾಂಗ್ರೆಸ್  ನಗರದ ಆಂಚೆ ಕಛೇರಿ ಬಳಿ ಪ್ರತಿಭಟನೆ ನಡೆಸಿದರು.


ನೈತಿಕ ಹೊಣೆಹೊತ್ತು ರಾಜೀನಾಮೆ ಕೊಟ್ಟು, ಅಸಮರ್ಥ ಗೃಹ ಸಚಿವ ಮತ್ತು ದಾಳಿಯ ತನಿಖೆಯನ್ನು ಪಾರದರ್ಶಕವಾಗಿ ಮಾಡುವಂತೆ ರಾಷ್ಟ್ರಪತಿಗಳಿ ಒತ್ತಾಯಿಸಿದರು. ದೇಶದ ಮತ್ತು ನಾಗರೀಕರ ಸುರಕ್ಷತೆಗಾಗಿ ಉಗ್ರರು ದೇಶದೊಳಗೆ ಪ್ರವೇಶಿಸದಂತೆ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕಾದ ಅನಿವಾರ್ಯತೆ ಇದೆ.


ಬಿಜೆಪಿ ಅಧಿಕಾರಿಕ್ಕೆ ಬಂದಾಗಿನಿಂದ ಇಂತಹ ದಾಳಿಗಳು ಚುನಾವಣಾ ಸಂದರ್ಭದಲ್ಲಿ ನಡೆಯುತ್ತಿವೆ. 2019ರ ಲೋಕಸಭಾ ಚುನಾವಣೆ ಸಮಯದಲ್ಲಿ ಪುಲ್ವಾಮಾ ದಾಳಿ, ನಂತರ ಮಣಿಪುರದಲ್ಲಿ ಈಗ ಬಿಹಾರ ವಿಧಾನಸಬೆ ಚುಣಾವಣೆ   ಸಮಯದಲ್ಲಿ ದಾಳಿ ನಡೆದಿರುವುದು ಎನ್‌ಡಿಎಗೆ ಮುಖಭಂಗವಾಗುವುದು ಖಚಿತ ಎಂದರು.

ADVERTISEMENT

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಮಧುಸೂದನ್,  ಗಿರೀಶ್, ಮಹಮ್ಮದ್ ಗೌಸ್, ಅಬ್ದುಲ್, ಆಕಾಶ್, ರಂಗೇಗೌಡರು, ಗಿರೀಶ್, ಇದ್ದರು.

ದೇಶದ ಮೇಲೆ ಉಗ್ರರ ದಾಳಿ

2019ರ ಫೆಬ್ರವರಿ 14ರಂದು ಅತ್ಯಂತ ಬಿಗಿಭದ್ರತೆ ಇರುವ ಪ್ರದೇಶಕ್ಕೆ 800 ಕೆ.ಜಿ.ಗೂ ಅಧಿಕ ತೂಕದ ಗ್ರಾನೇಟ್‌ಗಳನ್ನು ತಂದು ಸೈನಿಕರ ವಾಹನ ಗುರಿಯಾಗಿಸಿ ದಾಳಿ ಮಾಡಲಾಗಿತ್ತು. 22 ಏಪ್ರಿಲ್ 2025ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉದ್ಯಾನವನದಲ್ಲಿದ್ದ ನಾಗರೀಕರನ್ನು ಗುರಿಯಾಗಿಸಿಕೊಂಡಿದ್ದ ಉಗ್ರರು ಗುಂಡಿನ ಸುರಿಮಳೆಗೈದು ೨೬ ಅಮಾಯಕ ನಾಗರೀಕರನ್ನು ಹತ್ಯೆಗೈದಿದ್ದರು ಇದಕ್ಕೆಲ್ಲ ಕೇಂದ್ರ ಬೇಜವ್ದಾರಿಯ ಕಾರಣ.: ಚೇತನ್ಅಧ್ಯಕ್ಷ. ಜವಳಿ ಅಭಿವೃದ್ಧಿ ನಿಗಮದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.