ಹೊಸನಗರ: ತಾಲ್ಲೂಕಿನ ಕಚ್ಚಿಗೆಬೈಲು ಗ್ರಾಮದ ಚಾಂದಿನಿ, ಈ ಬಾರಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾರತೀಯ ಸೇನೆಯನ್ನು ಪ್ರತಿನಿಧಿಸಿ ಹೆಜ್ಜೆ ಹಾಕಲಿದ್ದಾರೆ.
ಇವರು ಗ್ರಾಮದ ಧರ್ಮಪ್ಪ–ವೇದಾವತಿ ದಂಪತಿಯ ಪುತ್ರಿ.
ಮಗಳು ಭಾರತೀಯ ಸೈನ್ಯ ಸೇರಬೇಕು ಎಂಬ ತಂದೆಯ ಕನಸನ್ನು ನನಸಾಗಿಸಿದ ಚಾಂದಿನಿ, ಪ್ರಸ್ತುತ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಾಥಮಿಕದಿಂದ ಪದವಿವರೆಗೂ ಸರ್ಕಾರಿ ಶಾಲೆಯಲ್ಲೇ ಓದಿದ ಚಾಂದಿನಿ, ಈವರೆಗೆ ಮೂರು ಬಾರಿ ಕರ್ತವ್ಯ ಪಥದ ಪರೇಡ್‌ಗೆ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.