ADVERTISEMENT

ಹುಣಸೆಕಟ್ಟೆ ಜಂಕ್ಷನ್: ಸಮಸ್ಯೆ ಆಲಿಸಿದ ಬಲ್ಕೀಶ್ ಬಾನು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 4:56 IST
Last Updated 7 ಸೆಪ್ಟೆಂಬರ್ 2025, 4:56 IST
ಭದ್ರಾವತಿ ತಾಲ್ಲೂಕಿನ ಹುಣಸೆಕಟ್ಟೆ ಜಂಕ್ಷನ್‌ನಲ್ಲಿ ಬಲ್ಕೀಶ್ ಬಾನು ಅವರನ್ನು ಮಸೀದಿ ಕಮಿಟಿಯಿಂದ ಸನ್ಮಾನಿಸಿ ಗೌರವಿಸಲಾಯಿತು
ಭದ್ರಾವತಿ ತಾಲ್ಲೂಕಿನ ಹುಣಸೆಕಟ್ಟೆ ಜಂಕ್ಷನ್‌ನಲ್ಲಿ ಬಲ್ಕೀಶ್ ಬಾನು ಅವರನ್ನು ಮಸೀದಿ ಕಮಿಟಿಯಿಂದ ಸನ್ಮಾನಿಸಿ ಗೌರವಿಸಲಾಯಿತು   

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಹುಣಸೆಕಟ್ಟೆ ಜಂಕ್ಷನ್‌ನಲ್ಲಿರುವ ಮಸೀದಿಗೆ ಶನಿವಾರ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಸ್ಥಳೀಯರ ಸಮಸ್ಯೆಯನ್ನು ಆಲಿಸಿ, ಮಸೀದಿಗೆ ಸಂಬಂಧಪಟ್ಟ ಕಾಮಗಾರಿಗಳ ಮಾಹಿತಿ ಪಡೆದರು.

ಮಸೀದಿಗೆ ಸಂಬಂಧಪಟ್ಟ ಕಾಮಗಾರಿಗಳ ಪೂರ್ಣಗೊಳಿಸಲು ಸರ್ಕಾರದಿಂದ ಅಗತ್ಯ ನೆರವು ಕೊಡಿಸುವುದಾಗಿ ಬಲ್ಕೀಶ್‌ ಬಾನು ಭರವಸೆ ನೀಡಿದರು.

ಮದೀನಾ ಮಸೀದಿ ಮುಸ್ಲಿಂ ಕಮಿಟಿ ಹಾಗೂ ಸುನ್ನಿ ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಬಲ್ಕೀಶ್ ಬಾನು ಅವರನ್ನು ಸ್ವಾಗತಿಸಿದರು. ನಂತರ ಅವರನ್ನು ದಾರು ಸಲಾಂ ಮುಸ್ಲಿಂ ಕಮಿಟಿ ಹಾಗೂ ಸುನಿ ಜಾಮಿಯಾ ಮಸೀದಿಯವರು ಸೇರಿ ಗ್ರಾಮಸ್ಥರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.