ADVERTISEMENT

ಶ್ರೀಗಂಧ, ಬೀಟೆ ತುಂಡುಗಳ ಅಕ್ರಮ ಸಂಗ್ರಹ: ಬಂಧನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 6:16 IST
Last Updated 29 ಡಿಸೆಂಬರ್ 2021, 6:16 IST
ಸಾಗರ ತಾಲ್ಲೂಕಿನ ಚಿಪ್ಳಿ-ಲಿಂಗದಹಳ್ಳಿ ಗ್ರಾಮದ ಅರಣ್ಯ ವಲಯದಲ್ಲಿ ಬೀಟೆ ಮತ್ತು ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪುರುಷೋತ್ತಮ ಎಂಬಾತನನ್ನು ಸೋಮವಾರ ಅರಣ್ಯ, ಪೊಲೀಸ್ ಸಿಬ್ಬಂದಿ ಬಂಧಿಸಿದ್ದಾರೆ.
ಸಾಗರ ತಾಲ್ಲೂಕಿನ ಚಿಪ್ಳಿ-ಲಿಂಗದಹಳ್ಳಿ ಗ್ರಾಮದ ಅರಣ್ಯ ವಲಯದಲ್ಲಿ ಬೀಟೆ ಮತ್ತು ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪುರುಷೋತ್ತಮ ಎಂಬಾತನನ್ನು ಸೋಮವಾರ ಅರಣ್ಯ, ಪೊಲೀಸ್ ಸಿಬ್ಬಂದಿ ಬಂಧಿಸಿದ್ದಾರೆ.   

ಸಾಗರ: ತಾಲ್ಲೂಕಿನ ಚಿಪ್ಳಿ-ಲಿಂಗದಹಳ್ಳಿ ವ್ಯಾಪ್ತಿಯ ಅರಣ್ಯ ವಲಯದಲ್ಲಿ ಸೋಮವಾರ ರಾತ್ರಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಪುರುಷೋತ್ತಮ್ ಎಂಬಾತನನ್ನು ಬಂಧಿಸಿ ಬೀಟೆ ಮತ್ತು ಶ್ರೀಗಂಧದ ತುಂಡುಗಳನ್ನು ವಶಕ್ಕೆಪಡೆದಿದೆ.

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಎರಡೂ ಇಲಾಖೆ ತಂಡಗಳು ಪುರುಷೋತ್ತಮ್ ಸಂಗ್ರಹಿಸಿಟ್ಟುಕೊಂಡಿದ್ದ ಶ್ರೀಗಂಧದ ತುಂಡು, ಬೀಟೆ ತುಂಡುಗಳ ಜೊತೆಗೆ ಪರವಾನಗಿ ಇಲ್ಲದೇ ಇರಿಸಿಕೊಂಡಿದ್ದ ಬಂದೂಕು ವಶಕ್ಕೆ ಪಡೆದು, ಅರಣ್ಯ ಇಲಾಖೆಯಲ್ಲಿ ಪ್ರಕರಣದಾಖಲಿಸಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಎಸಿಎಫ್ ಶ್ರೀಧರ್ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಪ್ರಮೋದ್ ಡಿ.ಆರ್. ಸಹಕಾರದೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಗಿರೀಶ್ ಮತ್ತು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಶ್ರೀಧರ್, ಅರಣ್ಯ ರಕ್ಷಕರಾದ ಪ್ರದೀಪ್, ಶಿವಾನಂದ್, ಸುಮಿತ, ವಾಹನ ಚಾಲಕ ಲೋಕೇಶ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.