ADVERTISEMENT

ಶಾಲೆಗಳ ಆರಂಭ 6 ತಿಂಗಳು ಮುಂದೂಡಲು ಆಗ್ರಹ

ತಜ್ಞರ ಅಭಿಪ್ರಾಯ ಕಲೆ ಹಾಕಿದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 13:29 IST
Last Updated 16 ಜೂನ್ 2020, 13:29 IST
ಶಿವಮೊಗ್ಗದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸದಸ್ಯರು ಕೊರೊನಾ ವೇಗವಾಗಿ ಹರಡುತ್ತಿರುವ ಪರಿಣಾಮ ಸರ್ಕಾರ ಶಾಲೆಗಳನ್ನು ತುರ್ತಾಗಿ ತೆರೆಯಬಾರದು ಎಂದು ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸದಸ್ಯರು ಕೊರೊನಾ ವೇಗವಾಗಿ ಹರಡುತ್ತಿರುವ ಪರಿಣಾಮ ಸರ್ಕಾರ ಶಾಲೆಗಳನ್ನು ತುರ್ತಾಗಿ ತೆರೆಯಬಾರದು ಎಂದು ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ ಅವರಿಗೆ ಮನವಿ ಸಲ್ಲಿಸಿದರು.   

ಶಿವಮೊಗ್ಗ: ಕೊರೊನಾವೇಗವಾಗಿ ಹರಡುತ್ತಿರುವ ಪರಿಣಾಮ ಸರ್ಕಾರಶಾಲೆಗಳನ್ನು ತುರ್ತಾಗಿತೆರೆಯಬಾರದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಕೊರೊನಾ ಈಗಲೂ ನಿಯಂತ್ರಣಕ್ಕೆ ಬಂದಿಲ್ಲ. ಮಕ್ಕಳ ಪ್ರಾಣ ಪಣಕ್ಕಿಟ್ಟು ಶಿಕ್ಷಣ ಕೊಡಿಸುವ ಅಗತ್ಯ ಇಲ್ಲ. ಆದರೆ, ಶಿಕ್ಷಣವೂ ಮುಖ್ಯ. ಹಾಗಾಗಿ, ಕನಿಷ್ಠ 6 ತಿಂಗಳು ಶಾಲೆಗಳನ್ನುತೆರೆಯುವುದು ಬೇಡ ಎಂದು ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್ಮನವಿ ಮಾಡಿದರು.

ಸಾಂಸ್ಕೃತಿಕ ವೇದಿಕೆ ಆನ್‌ಲೈನ್‌ ಮೂಲಕಶೈಕ್ಷಣಿಕ ವಿಚಾರ ಸಂಕಿರಣ ಆಯೋಜಿಸಿತ್ತು.ಮಾನಸಿಕ ತಜ್ಞರಾದ ಡಾ.ಪ್ರೀತಿ ಶಾನ್‌ಭಾಗ್, ಡಾ.ಗಂಗಾಧರ, ಫಾದರ್ ವೀರೇಶ್ ಮೋರಸ್, ಕೋಣಂದೂರು ಗಣೇಶ್ ಮೂರ್ತಿ, ಕಾಚಿನಕಟ್ಟೆ ಅಶೋಕ್ ಕುಮಾರ್, ವಿಜಯಾಶೆಟ್ಟಿ, ಎನ್‌.ಎಸ್.ಕುಮಾರ್, ಕೃಷ್ಣಮೂರ್ತಿ ಹಿಳ್ಳೋಡಿ, ಬಿ.ಪಾಪಯ್ಯ, ಸುಕೇಶ್ ಶೇರೇಗಾರ್, ಕೆ. ಕೌಸ್ತುಭಾ, ಧನ್ಯಶ್ರೀ, ಕಟ್ಟೇಹಕ್ಲು ಅನನ್ಯ, ಕಾಚಿನಕಟ್ಟೆ ಕಲ್ಯಾಣಿ ಚರ್ಚೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಆನ್‌ಲೈನ್‌ಶಿಕ್ಷಣ ಕೊಠಡಿಯ ಕಲಿಕೆಗೆ ಸಮಾನವಲ್ಲ. ಶೇಕಡಾ60ರಷ್ಟು ಮಕ್ಕಳನ್ನೂತಲುಪುತ್ತಿಲ್ಲ. ಹಲವು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡು‌ವ ಶಿಕ್ಷಕರಿಗೆ ವೇತನಇಲ್ಲ. ಸರ್ಕಾರ ಅವರ ನೆರವಿಗೆ ಬರಬೇಕು. ಶಿಕ್ಷಕರ ಬ್ಯಾಂಕ್ ಖಾತೆಗೆ ಹಣನೀಡಬೇಕು ಎಂಬಒತ್ತಾಯ ಕೇಳಿಬಂದಿದೆ ಎಂದರು.

ಸದ್ಯಕ್ಕೆ ಶಾಲೆಗಳು ತೆರೆಯುವುದು ಬೇಡ. ಅಲ್ಲಿಯವರೆಗೂ ಪೂರಕವಾದ ಶಿಕ್ಷಣ ಚಟುವಟಿಕೆ ಮುಂದುವರಿಸಬಹುದು. ಸರ್ಕಾರಎಚ್ಚರಿಕೆ ಮಾರ್ಗ ಅನುಸರಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆ ಪದಾಧಿಕಾರಿಗಳಾದ ಭಾರತಿ ರಾಮಕೃಷ್ಣ,ಡಿ.ಗಣೇಶ್, ಎಸ್.ಶಿವಮೂರ್ತಿ,ಯು.ಮಧುಸೂದನ್ ಐತಾಳ್,ಭೈರಾಪುರ ಶಿವಪ್ಪಗೌಡ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.