ADVERTISEMENT

ಶಿವಮೊಗ್ಗ ಜಿಲ್ಲೆಯ ಮೂವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 12:03 IST
Last Updated 28 ಅಕ್ಟೋಬರ್ 2020, 12:03 IST
ಡಾ.ಸಿ.ವಾಸದೇವಪ್ಪ
ಡಾ.ಸಿ.ವಾಸದೇವಪ್ಪ   

ಶಿವಮೊಗ್ಗ:ಜಿಲ್ಲೆಯ ಮೂವರುಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಬಿ.ಎಸ್.ಶ್ರೀನಾಥ್, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಡಾ.ಸಿ.ವಾಸುದೇವಪ್ಪ ಹಾಗೂ ಯಕ್ಷಗಾನ ಕಲಾವಿದ ತೀರ್ಥಹಳ್ಳಿಯ ಎಂ.ಕೆ.ರಮೇಶ್ ಆಚಾರ್ಯ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಾ.ಸಿ.ವಾಸುದೇವಪ್ಪ:

ಮೂಲತಃ ಶಿಕಾರಿಪುರ ತಾಲ್ಲೂಕು ಈಸೂರಿನವಾಸುದೇವಪ್ಪ ಶಿವಮೊಗ್ಗ ನವುಲೆಯ ಕೃಷಿ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿಕಾರ್ಯನಿರ್ವಹಿಸಿದ್ದರು. ಮೂರೂವರೆ ವರ್ಷ ಸೇವೆಸಲ್ಲಿಸಿದ್ದರು. ಮೇ 19, 1953ರಲ್ಲಿ ಜನಿಸಿರುವ ಅವರು ಮತ್ಸ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ ನಿರಂತರ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಹರ್ಯಾಣದಲ್ಲಿರುವ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ADVERTISEMENT

ರಮೇಶ್ ಆಚಾರ್ಯ:

ಯಕ್ಷಗಾನ ಕಲಾವಿದ ರಮೇಶ್ ಆಚಾರ್ಯಅವರದು ತೀರ್ಥಹಳ್ಳಿ ತಾಲ್ಲೂಕು ಮುತ್ತೂರು ಹೋಬಳಿ ಕಟ್ಟೆಹಕ್ಕಲು–ಆಲ್ಮನೆ ಐದನೇ ತರಗತಿ ಓದುವಾಗಲೇ ಯಕ್ಷಗಾನದತ್ತ ವಾಲಿದ್ದರು.ಯಕ್ಷಗಾನ ರಂಗದಲ್ಲಿ 57 ವರ್ಷ ಸೇವೆ ಸಲ್ಲಿಸಿದ್ದಾರೆ. ಧರ್ಮಸ್ಥಳ, ಸುರತ್ಕಲ್, ತೀರ್ಥಳ್ಳಿ, ಸೋಮವಾರ ಸಂತೆಮೊದಲಾದ ಯಕ್ಷಗಾನ ಮಂಡಳಿಗಳಲ್ಲಿ ಕಲಾವಿದರಾಗಿ, ಪದ್ಯ ರಚನಾಕಾರ, ನಿರ್ದೇಶಕ, ತಾಳಮದ್ದಲೆ ಅರ್ಥದಾರಿಯಾಗಿ ಪಾಂಡಿತ್ಯ ಹೊಂದಿದ್ದಾರೆ. ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದಾರೆ.

ಡಾ.ಬಿ.ಎಸ್.ಶ್ರೀನಾಥ್:ಡಾ.ಶ್ರೀನಾಥ್ ಮೂಲತಃ ಭದ್ರಾವತಿ ತಾಲ್ಲೂಕಿನವರು. ಕ್ಯಾನ್ಸರ್ ರೋಗ ತಜ್ಞರಾದ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.