ADVERTISEMENT

ಸಂಭಾವನೆ ಪಡೆಯದೇ ಆರ್‌ಟಿಇ ಪ್ರಚಾರ: ಪುನೀತ್ ಸ್ಮರಿಸಿದ ಕಿಮ್ಮನೆ ರತ್ನಾಕರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 7:47 IST
Last Updated 30 ಅಕ್ಟೋಬರ್ 2021, 7:47 IST
ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್   

ಶಿವಮೊಗ್ಗ: ಶಿಕ್ಷಣ ಇಲಾಖೆಯ ರಾಯಭಾರಿಯಾಗಿ ನಟ ಪುನೀತ್ ರಾಜ್‌ಕುಮಾರ್ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದರು. ಹಣ ಪಡೆಯದೇ ದೊಡ್ಡತನ ಮೆರೆದಿದ್ದರು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸ್ಮರಿಸಿದ್ದಾರೆ.

2015ರಲ್ಲಿ ಶಿಕ್ಷಣ ಮಂತ್ರಿಯಾಗಿದ್ದಾಗ ಕಾರ್ಯಕ್ರಮದಲ್ಲಿ ಸಿಕ್ಕ ಪುನಿತ್‌ಗೆ ಇಲಾಖೆಯ ರಾಯಭಾರಿಯಾಗಿ ಆರ್‌ಟಿಇ ಪ್ರಚಾರಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದೆವು. ಭೂಮಿ ತೂಕದ ಸದ್ಗುಣಗಳ ಮನುಷ್ಯ ಒಂದು ನಗೆಯ ಜತೆಗೆ ಒಪ್ಪಿಗೆ ಸೂಚಿಸಿದ್ದರು. ಒಂದು ರುಪಾಯಿ ಕೂಡಾ ಸಂಭಾವನೆ ಪಡೆಯಲಿಲ್ಲ. ಶಿಕ್ಷಣ ಇಲಾಖೆ ರೂಪಿಸಿದ ಹಾಡು ಮನೆ‌ಮನೆಗೆ ತಲುಪಿಸುವ ಮೂಲಕ ಆರ್‌ಟಿಇ ಯಶಸ್ವಿ ಅನುಷ್ಠಾನದಲ್ಲಿ ಸಹಕರಿಸಿದ್ದರು. ಅಂದು ಕೃತಜ್ಞತಾಪೂರಕವಾಗಿ ‘ನೀವು ರಾಜಕುಮಾರನ ಮಗನೇ ಸೈ. ಹೆಸರಿಗೆ ಮಾತ್ರವಲ್ಲ, ಗುಣದಲ್ಲೂ ಅಷ್ಟೇ’ ಎಂದಾಗ ‘ಅಪ್ಪಾಜಿಯ ಆಶಿರ್ವಾದ’ ಎಂದು ನಿಷ್ಕಲ್ಮಷ ನಗೆ ಬೀರಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT