ADVERTISEMENT

ಶಿವಮೊಗ್ಗದಲ್ಲಿ ಕೋಳಿ, ಮೊಟ್ಟೆ ಮಾರಾಟ ಪುನಾರಂಭ: ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 13:06 IST
Last Updated 3 ಏಪ್ರಿಲ್ 2020, 13:06 IST
ಶಿವಮೊಗ್ಗದ ರವೀಂದ್ರನಗರ ನ್ಯಾಯಬೆಲೆ ಅಂಗಡಿ ಮುಂದೆ ಜನರು ಸರದಿಯಲ್ಲಿ ನಿಂತು ಪಡಿತರ ಪಡೆದರು.
ಶಿವಮೊಗ್ಗದ ರವೀಂದ್ರನಗರ ನ್ಯಾಯಬೆಲೆ ಅಂಗಡಿ ಮುಂದೆ ಜನರು ಸರದಿಯಲ್ಲಿ ನಿಂತು ಪಡಿತರ ಪಡೆದರು.   

ಶಿವಮೊಗ್ಗ: ಜಿಲ್ಲೆಯಲ್ಲಿ ಕೋಳಿ ಮಾಂಸ, ಮೊಟ್ಟೆ ಮಾರಾಟ ಮತ್ತೆ ಪುನರಾರಂಭವಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಜ್ವರಕಾಣಿಸಿಕೊಂಡ ಕಾರಣ ಜಿಲ್ಲೆಯಲ್ಲೂನಿರ್ಬಂಧ ಹೇರಲಾಗಿತ್ತು. ಪರಿಸ್ಥಿತಿ ಅವಲೋಕಿಸಿದ ನಂತರ, ತಜ್ಞರ ವರದಿ ಪಡೆದು ಮತ್ತೆಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹವಾದ ಕಾರಣ ಕೊಳೆಗೇರಿ ನಿವಾಸಿಗಳು, ಕಾರ್ಮಿಕರು, ಬಡವರಿಗೆ ಉಚಿತ ಹಾಲು ವಿತರಿಸಲಾಗುತ್ತಿದೆ. ಪ್ರತಿ ಕುಟುಂಬಕ್ಕೆ ನಿತ್ಯವೂ ಒಂದು ಲೀಟರ್ ಹಾಲುನೀಡಲಾಗುವುದು.ಶಿವಮೊಗ್ಗ ನಗರದಲ್ಲಿ 56 ಅಧಿಕೃತ ಕೊಳೆಗೇರಿಗಳಿವೆ. ಅನಧಿಕೃಕೊಳಗೇರಿಗಳು, ಕಟ್ಟಡ ಕಾರ್ಮಿಕರ ವಸತಿ ತಾಣಗಳು, ವಲಸೆ ಬಂದ ಕಾರ್ಮಿಕ ಕುಟುಂಬಗಳಿಗೂ ಹಾಲು ವಿತರಿಸಲಾವುದು.ಸಮರ್ಪಕ ವಿತರಣೆಗೆಸ್ವಯಂ ಸೇವಕರ ನೆರವು ಪಡೆಯಲಾಗಿದೆ ಎಂದರು.

ADVERTISEMENT

ತರಕಾರಿ ಹಣ್ಣು ವಿತರಣೆಗೆ ಕ್ರಮ: ಜಿಲ್ಲೆಯಲ್ಲಿ ತರಕಾರಿ ಮತ್ತು ಹಣ್ಣು ಮಾರಾಟಕ್ಕೆಕ್ರಮ ಕೈಗೊಳ್ಳಲಾಗಿದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ 43 ತಳ್ಳು ಗಾಡಿಗಳಿಗೆ ಅನುಮತಿ ನೀಡಲಾಗಿದೆ. ಹಾಪ್‍ಕಾಮ್ಸ್ ವತಿಯಿಂದ ಹಣ್ಣುಹಂಪಲು ಮಾರಾಟಕ್ಕೆ 30 ವಾಹನಗಳಿಗೆ ಅನುಮತಿ ನೀಡಲಾಗಿದೆ. ಇನ್ನೂ 20 ವಾಹನಗಳಿಗೆ ಅನುಮತಿ ನೀಡಲಾಗುವುದು. ಈ ವಾಹನಗಳಲ್ಲಿ ದರಪಟ್ಟಿ ಲಗತ್ತಿಸಲಾಗುತ್ತದೆ. ಅಧಿಕ ದರ ಪಡದರೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ವಿವರ ನೀಡಿದರು.

ನಗರದ ಎಲ್ಲಾ ವಾರ್ಡ್‍ಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಕಾರ್ಯ ನಡೆಯುತ್ತಿದೆ.ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಲುಸೂಚಿಸಲಾಗಿದೆ.ಪೌರಕಾರ್ಮಿಕರಿಗೆ ಮಧ್ಯಾಹ್ನದ ಊಟ ಒದಗಿಸಲಾಗುತ್ತಿದೆ. ಪೌರ ಕಾರ್ಮಿಕರ ಕುಟುಂಬಗಳಿಗೆಆಹಾರ ಧಾನ್ಯದ ಕಿಟ್ನೀಡಲಾಗುತ್ತಿದೆ ಎಂದರು.

ಕರೋನಾ ಸಾಂಕ್ರಾಮಿಕ ರೋಗ ಯಶಸ್ವಿಯಾಗಿ ಎದುರಿಸಲು ಎಲ್ಲರ ಸಹಕಾರ ಅಗತ್ಯ. ಗಾಳಿ ಸುದ್ದಿ, ವದಂತಿಗಳನ್ನು ಯಾರೂ ನಂಬಬಾರದು ಎಂದುಮನವಿ ಮಾಡಿದರು.

ಇದಕ್ಕೂ ಮೊದಲು ಸಚಿವರು ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ ನಡೆಸಿದರು.ನಗರದ ಹೊಳೆ ಬಸ್‌ನಿಲ್ದಾಣದ ಬಳಿ ಇರುವ ನಗರ ಪಾಲಿಕೆ ಕಾಂಪ್ಲೆಕ್ಸ್‌ನಲ್ಲಿ ಹಸಿವು ಮುಕ್ತ ಕರ್ನಾಟಕ ಯೋಜನೆಯಡಿ ಕೂಲಿ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಬೆಳಗಿನ ಉಪಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.