
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಬಿಎಸ್ಸಿ ಪದವಿಯ ನಾಲ್ಕನೇ ಸೆಮಿಸ್ಟರ್‌ನ 2025– 2028ನೇ ಸಾಲಿಗೆ ವಿಜ್ಞಾನ ಸೌರಭ– 4 ಕನ್ನಡ ಭಾಷಾ ಪಠ್ಯಪುಸ್ತಕಕ್ಕೆ ಪತ್ರಕರ್ತ ಆರುಂಡಿ ಶ್ರೀನಿವಾಸಮೂರ್ತಿ ಅವರ ‘ಕಪ್ಪು ಮಣ್ಣಿನ ಕಣ್ಣು’ (ಎರಡನೇ ಮುದ್ರಣ) ಪುಸ್ತಕದಿಂದ ‘ಹಳ್ಳು ಕಟ್ಟು’ ಎಂಬ ಲೇಖನ ಆಯ್ದುಕೊಳ್ಳಲಾಗಿದೆ.
ಪ್ರಸ್ತುತ ಲೇಖನದಲ್ಲಿ ಛಾಯಾಚಿತ್ರಗಳನ್ನು ಗೋಡೆಗೆ ಹಾಕುವ ಹಳ್ಳಿಗಳಲ್ಲಿನ ವಿಶಿಷ್ಟ ಸಂಸ್ಕೃತಿಯ ಚಿತ್ರಣ ಇಲ್ಲಿದೆ. ಆಲ್ಬಂಗಳ ಆರ್ಭಟಗಳಲ್ಲಿ ಫ್ರೇಂ ಹಾಕಿಸಿದ ಫೋಟೋ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಮನುಷ್ಯ ಜೀವನದ ಹುಟ್ಟಿನಿಂದ ಹಿಡಿದು ಸಾವಿನತನಕ ಛಾಯಾಚಿತ್ರಗಳನ್ನು ತೆಗೆಸುವ ಸಂದರ್ಭ ಮತ್ತು ಅಲ್ಲಿರಬಹುದಾದ ಭಾವನೆ ಈ ಲೇಖನದಲ್ಲಿದೆ. ಪ್ರೊ. ನೆಲ್ಲಿಕಟ್ಟೆ ಸಿದ್ಧೇಶ್ ನೇತೃತ್ವದ ಪಠ್ಯಪುಸ್ತಕ ರಚನಾ ಸಮಿತಿ ಈ ಲೇಖನವನ್ನು ಆಯ್ಕೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.