ಆನವಟ್ಟಿ: ‘ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಅವರ ಹೆಸರು ಕೇಳಿಬರುತ್ತಿದೆ. ಹೆಸರು ಬಂದ ಕೂಡಲೇ ತಪ್ಪು ಮಾಡಿದ್ದಾರೆ ಎಂದು ಅರ್ಥವಲ್ಲ. ಉಪಮುಖ್ಯಮಂತ್ರಿ ಆಗಿರುವುದರಿಂದ ಪ್ರಕರಣದಲ್ಲಿ ಅವರ ಪಾತ್ರ ಇಲ್ಲ ಎಂದು ಸಾಬೀತು ಆಗುವವರೆಗೆ ರಾಜೀನಾಮೆ ನೀಡಲಿ’ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಒತ್ತಾಯಿಸಿದರು.
ಸ್ವಗ್ರಾಮ ಕುಬಟೂರು ಮತಕೇಂದ್ರದಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
‘ಕಲಾ ಅಭಿಮಾನಿಗಳ ಆರಾಧ್ಯ ದೇವರಾದ ಡಾ.ರಾಜಕುಮಾರ್ ಅವರ ಹೆಸರು ಹೇಳಿ, ನಟ ಶಿವರಾಜಕುಮಾರ್ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮೂಲಕ ಅವರ ಗೌರವಕ್ಕೆ ಧಕ್ಕೆ ಉಂಟುಮಾಡಿದ್ದಾರೆ. ಶಿಕ್ಷಣ ಮಂತ್ರಿ ಆಗಿರುವ ಮಧು ಬಂಗಾರಪ್ಪ ದುರಹಂಕಾರಿ ಹಾಗೂ ದ್ವೇಷ ರಾಜಕರಣಕ್ಕಾಗಿ ತಂದೆ ಬಂಗಾರಪ್ಪ ಅವರ ಹೆಸರು ಬಳಕೆ ಮಾಡಿದ್ದಾರೆ. ದ್ವೇಷ ರಾಜಕರಣಕ್ಕಾಗಿ ನನ್ನ ತಂಗಿ ಗೀತಾ ಅವರನ್ನು ಚುನಾವಣೆಗೆ ನಿಲ್ಲಿಸಿದ್ದು, ಸೋಲು ಖಚಿತ. ರಾಘವೇಂದ್ರ ಅವರ ಗೆಲುವು ಶೇ 100 ಖಚಿತ’ ಎಂದ ಅವರು, ಶಿಕ್ಷಣ ಇಲಾಖೆಯ ಗಂಧಗಾಳಿ ಗೊತ್ತಿಲ್ಲದ ಮಧು ಬಂಗಾರಪ್ಪ ಕರ್ನಾಟಕದ ಪಪ್ಪು’ ಎಂದು ಲೇವಡಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.