ADVERTISEMENT

ತೀರ್ಥಹಳ್ಳಿ: ಸಿಡಿಲು ಬಡಿದು 93 ಅಡಿಕೆ ಚೀಲಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 14:29 IST
Last Updated 6 ಏಪ್ರಿಲ್ 2025, 14:29 IST
<div class="paragraphs"><p>ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಿಡಿಲಿಗೆ ಹಾನಿಯಾದ ಅಡಿಕೆ ಮತ್ತು ಮನೆಯನ್ನು ಶಾಸಕ ಆರಗ ಜ್ಞಾನೇಂದ್ರ ವೀಕ್ಷಿಸಿದರು</p></div>

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಿಡಿಲಿಗೆ ಹಾನಿಯಾದ ಅಡಿಕೆ ಮತ್ತು ಮನೆಯನ್ನು ಶಾಸಕ ಆರಗ ಜ್ಞಾನೇಂದ್ರ ವೀಕ್ಷಿಸಿದರು

   

ತೀರ್ಥಹಳ್ಳಿ: ಸಿಡಿಲು ಬಡಿದ ಪರಿಣಾಮ 93 ಅಡಿಕೆ ಚೀಲಗಳು ಸುಟ್ಟು ಕರಕಲಾದ ಘಟನೆ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುವಳ್ಳಿ ರಜತ್‌ ಹೆಗ್ಡೆ ನಿವಾಸದಲ್ಲಿ ನಡೆದಿದೆ.

ಶನಿವಾರ ರಾತ್ರಿ 7 ಗಂಟೆಯ ಸಮಯದಲ್ಲಿ ಜೋರಾದ ಸಿಡಿಲು, ಗುಡುಗು ಸಹಿತ ಗಾಳಿ–ಮಳೆ ಸುರಿದಿದೆ. ಈ ವೇಳೆ ಮನೆಯ ಒಂದು ಭಾಗದ ಕೊಠಡಿಯಲ್ಲಿ ಇಟ್ಟಿದ್ದ ಅಡಿಕೆ ಮೂಟೆಗಳಿಗೆ ಸಿಡಿಲು ತಗುಲಿದೆ. ಚೀಲದಲ್ಲಿದ್ದ ಅಡಿಕೆ ಸುಟ್ಟಿದೆ. ಸಮೀಪದಲ್ಲಿ ಇರಿಸಿದ್ದ ಅಡಿಕೆ ಸುಲಿಯುವ ಯಂತ್ರಕ್ಕೂ ಬೆಂಕಿ ತಗುಲಿದ್ದು, ಅದೂ ಸುಟ್ಟುಹೋಗಿದೆ. 

ADVERTISEMENT

ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ, ಎಂಎಡಿಬಿ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.